ಚಿನ್ನದ ಕೆಲಸಗಾರರ ಸಂಘದ ಮಹಾಸಭೆ

Update: 2017-08-21 17:55 GMT

ಮಂಗಳೂರು, ಆ.21: ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ 40ನೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರಗಿತು.
ಮಂಗಳೂರು ಶ್ರೀಕಾಳಿಕಾಂಬಾ ನಾಯಕ ದೇವಸ್ಥಾನದ ಪಟ್ಟೇಲಿಂಗಪ್ಪಾಚಾರ್ಯ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಮೇಶ್ ಆಚಾರ್ಯ ಉಪ್ಪಿನಂಗಡಿ ವಹಿಸಿದ್ದರು.

ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅರುಣ್ ಜಿ. ಶೇಟ್ ಹಾಗೂ ಕೆಐಒಸಿಎಲ್‌ನ ನಿವೃತ್ತ ಪ್ರಬಂಧಕ ಬಾಲಕೃಷ್ಣ ಎಂ. ಆಚಾರ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಂಘದ ಉಪಾಧ್ಯಕ್ಷ ಕೆ.ಎಲ್. ಹರೀಶ್ ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯ ರಮೇಶ್ ಮಪಲಾಡಿ ಸಂದೇಶ ವಾಚನಗೈದರು. ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಹಲೇಜಿ ವಾರ್ಷಿಕ ವರದಿ ವಾಚಿಸಿದರು. ಲೆಕ್ಕಪತ್ರವನ್ನು ಕೋಶಾಧಿಕಾರಿ ಗಣೇಶ್ ಆಚಾರ್ಯ ಕೆಮ್ಮಣ್ಣು ಮಂಡಿಸಿದರು.

ಈ ಸಂದರ್ಭ ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯ ಕುರಿತು ಮೈಟೆಕ್ ವಿದ್ಯಾಸಂಸ್ಥೆಯ ಉದಯ ಕುಮಾರ್ ಆಚಾರ್ಯ ಮಾಹಿತಿ ನೀಡಿದರು.ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯನ್ನು ಮಾಜಿ ಅಧ್ಯಕ್ಷ ರಾಜೇಶ್ ಎಂ.ಆರ್. ನಿರ್ವಹಿಸಿದರು. ಆಡಳಿತ ಮಂಡಳಿ ಸದಸ್ಯರ ಕೆ.ಎಲ್. ಸುರೇಶ್ ವಂದಿಸಿದರು. ಪಿ. ರವೀಂದ್ರ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News