ಜಿಲ್ಲೆಯಲ್ಲಿ ಮುಂದುವರೆದ ಪೊಲೀಸ್ ದಾಳಿ: 16 ಮಂದಿಯ ಬಂಧನ

Update: 2017-08-22 14:59 GMT

ಉಡುಪಿ, ಆ. 22: ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್‌ರ ಸೂಚನೆಯಂತೆ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸರ ಕಾರ್ಯಾ ಚರಣೆ ಮುಂದುವರಿದಿದ್ದು, ಆ.21ರಂದು ಜಿಲ್ಲೆಯಾದ್ಯಂತ ನಡೆದ ದಾಳಿಯಲ್ಲಿ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ.

ಮಟ್ಕಾ ಜುಗಾರಿ:   ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಬ್ರಕಟ್ಟೆ ಬಸ್ ನಿಲ್ದಾಣದ ಬಳಿ ಕೆದೂರು ಬೆಳಗೋಡಿನ ವಿಜಯ ಕುಮಾರ್(36), ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಹೇರೂರಿನ ರವಿ ಶೆಟ್ಟಿ(29), ಆರೂರು ಗ್ರಾಮದ ಪೇತ್ರಿಯ ಮಡಿ ರಸ್ತೆಯ ಮಾರ್ಕೆಟ್ ಬದಿಯಲ್ಲಿ ಕೆಳಕರ್ಜೆಯ ಸುರೇಶ ಶೆಟ್ಟಿ(53), ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬಿದ್ರಿ ನವರಂಗ ಬಾರ್ ಬಳಿ 2095ರೂ. ನಗದು ಸಹಿತ ಉಚ್ಚಿಲ ಭಾಸ್ಕರ ನಗರದ ಮನೋಜ್ ಕೋಟ್ಯಾನ್(39), ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ಮೀನು ಮಾರ್ಕೆಟ್ ಬಳಿ 2300ರೂ. ನಗದು ಸಹಿತ ಏಣಗುಡ್ಡೆಯ ಶ್ರೀಶೈಲ(29), ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಐರ್ಬೈಲು ಎಂಬಲ್ಲಿ ಉಳ್ಳೂರಿನ ಶೀನ(70), ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ ಬಸ್ ನಿಲ್ದಾಣದ ಬಳಿ ತೆಂಕಬೆಟ್ಟುವಿನ ಅಂತೋನಿ ಡಿಸೋಜ (35), ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣದ ಬಳಿ 1295ರೂ. ನಗದು ಸಹಿತ ಕುತ್ಪಾಡಿಯ ಕರಿಯಪ್ಪ(35) ಮತ್ತು ಸರ್ವೀಸ್ ಬಸ್ ನಿಲ್ದಾಣದ ಬಳಿ 1,160ರೂ. ಸಹಿತ ಮಲ್ಪೆಯ ಗಣೇಶ್ ಮಲ್ಪೆ(25), ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಜಟಕಾ ಸ್ಟಾಂಡ್ ಬಳಿ ಚಿಟ್ಪಾಡಿಯ ಸಂಜೀವ(60) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಜು.22ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗುಂಜೆ ಗ್ರಾಮದ ಶಿರೂರು ಮೂರುಕೈ ಎಂಬಲ್ಲಿ ನೀರ್ಜೆಡ್ಡುವಿನ ವಿಘ್ನೇಶ(31) ಎಂಬಾತನನ್ನು ಉಡುಪಿ ಡಿಸಿಐಬಿ ಪೊಲೀಸರು 1750ರೂ. ನಗದು ಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.

ಅಂದರ್‌ಬಾಹರ್: ನಾವುಂದ ಗ್ರಾಮದ ಮಸ್ಕಿ ವಿನಾಯಕ ಹೋಟೆಲ್ ಬಳಿ ಆ.21ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಹೆಮ್ಮಾಡಿಯ ರೋಹಿತ್ ಪೂಜಾರಿ(28), ಉಳ್ಳೂರು ಗ್ರಾಮದ ಸೀತಾರಾಮ ಶೆಟ್ಟಿ(42), ಜಯರಾಮ ಶೆಟ್ಟಿ, ನಾವುಂದದ ಸುಲೆಮಾನ್(42) ಎಂಬವರನ್ನು ಪೊಲೀಸರು ಬಂಧಿಸಿ 1170ರೂ. ನಗದು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ:  ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕುಂಜೆ ಗ್ರಾಮದ ನೇರಳೆಕಟ್ಟೆ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗುಲ್ವಾಡಿಯ ಮಂಜುನಾಥ ಪೂಜಾರಿ(39) ಎಂಬಾ ತನನ್ನು ಪೊಲೀಸರು ಬಂಧಿಸಿ, 1680ರೂ. ಮೌಲ್ಯದ ಮದ್ಯ ಹಾಗೂ 600 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News