ಅದ್ವೈತ್ ಹುಂಡೈಯ ‘ನೆಕ್ಸ್ಟ್ ಜೆನ್ ವರ್ನಾ’ ಕಾರು ಮಾರುಕಟ್ಟೆಗೆ

Update: 2017-08-22 15:16 GMT

ಮಂಗಳೂರು, ಆ. 22: ಕಾರು ತಯಾರಿಕಾ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಅದ್ವೈತ್ ಹುಂಡೈ ಸಂಸ್ಥೆಯಿಂದ ‘ನೆಕ್ಸ್ಟ್ ಜೆನ್ ವರ್ನಾ’ ನೂತನ ಕಾರನ್ನು ನಗರದ ಕುಂಟಿಕಾನದಲ್ಲಿರುವ ಹುಂಡೈನ ಅಧಿಕೃತ ವಿತರಕರಾಗಿರುವ ಅದ್ವೈತ್ ಹುಂಡೈ ಶೋ ರೂಂನಲ್ಲಿ ಮಂಗಳವಾರ ನಡೆದ ಸರಳ ಕಾರ್ಯಕ್ರಮಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

‘ನೆಕ್ಸ್ಟ್ ಜೆನ್ ವರ್ನಾ’ ಕಾರನ್ನು ‘ಮಿಸಸ್ ಪಾಪ್ಯುಲರ್ ಮಿಸಸ್ ವಲ್ಡ್‌ವೈಡ್’ ಮಿಸಸ್ ಸೌಜನ್ಯಾ ಹೆಗ್ಡೆ ಅವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಹಾ ಪ್ರಬಂಧಕ ಮೆಲ್ವಿನ್ ಫೆರ್ನಾಂಡಿಸ್, ಸೇಲ್ಸ್ ಮ್ಯಾನೇಜರ್ ಶಿವಪ್ರಸಾದ್, ಅಕೌಂಟ್ಸ್ ಮ್ಯಾನೇಜರ್ ಸುಧಾಕರ, ಸರ್ವಿಸ್ ವಿಭಾಗದ ಮ್ಯಾನೇಜರ್ ಶಶಿಕಾಂತ್ ಶೆಟ್ಟಿ ಹಾಗೂ ಶೋ ರೂಂ ಮ್ಯಾನೇಜರ್ ರಾಜೇಶ್ ಉಳ್ಳಾಲ್ ಉಪಸ್ಥಿತರಿದ್ದರು.

ನೆಕ್ಸ್ಟ್ ಜೆನ್ ವರ್ನಾ ಕಾರು ಏಳು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ 1.6 ಲೀ. ಇಂಜಿನ್ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್‌ನಲ್ಲಿ 123 ಪಿ.ಎಸ್. ಮತ್ತು ಡೀಸೆಲ್‌ನಲ್ಲಿ 128 ಪಿ.ಎಸ್. ಸಾಮರ್ಥ್ಯವನ್ನು ಹೊಂದಿದೆ.

ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ವಿದ್ ಎಲ್‌ಇಡಿ ಡೇ ರನ್ನಿಂಗ್ ಲೈಟ್ಸ್ ಆ್ಯಂಡ್ ಕೊರ್‌ನರಿಂಗ್ ಲೈಟ್ಸ್, ಪ್ರೊಜೆಕ್ಟರ್ ಫೊಗ್ ಲ್ಯಾಂಪ್ಸ್, ಹುಂಡೈ ಸಿಗ್ನೇಚರ್ ಕ್ಯಾಸ್‌ಕೇಡ್ ಡಿಸೈನ್ ಫ್ರಂಟ್ ಗ್ರಿಲ್, ಎಲ್‌ಇಡಿ ಕೊಂಬಿನೇಶನ್ ಟೈಲ್ ಲ್ಯಾಂಪ್, ವರ್ಲ್ಡ್ ಪ್ರೀಮಿಯರ್ ಇಕೋ ಕೋಟಿಂಗ್ ಟೆಕ್ನೋಲಜಿ, ಫ್ರಂಟ್ ವೆಂಟಿಲೇಟೆಡ್ ಸೀಟ್ಸ್, ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್, ರಿಯರ್ ಎ.ಸಿ. ವೆಂಟ್ಸ್, ಕ್ರೂಸ್ ಕಂಟ್ರೋಲ್ ಸಿಕ್ಸ್ ಏರ್ ಬ್ಯಾಗ್ಸ್, ಎ.ಬಿ.ಎಸ್. 7 ಇಂಚ್ ಟಚ್ ಸ್ಕ್ರೀನ್, ಐಪಿಎಸ್ ಡಿಸ್ಪ್ಲೇ ವಿದ್ ಐ ಬ್ಲೂ, ಏಪಲ್ ಕರ್ ಪ್ಲೇ ಮೊದಲಾದ ವಿಶಿಷ್ಟ ಗುಣಗಳನ್ನು ಹೊಂದಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News