ತಲಾಕ್ ತೀರ್ಪು: ಶೋಭಾ ಹರ್ಷ

Update: 2017-08-22 15:52 GMT

ಉಡುಪಿ, ಆ.22: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 71 ವರ್ಷಗಳ ಬಳಿಕ ಮುಸ್ಲಿಂ ಮಹಿಳೆಯರಿಗೆ ಸುಪ್ರೀಂ ಕೋರ್ಟಿನ ತೀರ್ಪಿನ ಮೂಲಕ ಸಿಕ್ಕಿರುವ ಸ್ವಾತಂತ್ರ್ಯದ ಕುರಿತಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದರಿಂದ 1400 ವರ್ಷಗಳ ಸಾಮಾಜಿಕ ಪಿಡುಗಿಗೆ ಪೂರ್ಣ ವಿರಾಮ ಬಿದ್ದಂತಾಗಿದೆ ಎಂದವರು ಹೇಳಿದ್ದಾರೆ.

ಮೂರು ತಲಾಖ್‌ನಿಂದ ಪತ್ನಿಯನ್ನು ಅನಾಥವಾಗಿ ಮಾಡುವ ಅಮಾನುಷ ಕಾನೂನು ಕೊನೆಗೂ ಅಂತ್ಯವಾಗಿದೆ. ದೇಶದ ಸುಪ್ರೀಂಕೋರ್ಟ್ ನೀಡಿದ ಈ ಐತಿಹಾಸಿಕ, ಚಾರಿತ್ರಿಕ ನಿರ್ಧಾರದಿಂದ ಇಡೀ ದೇಶದ 125 ಕೋಟಿ ಜನರ ಗೌರವವನ್ನು ಎತ್ತಿ ಹಿಡಿದಂತಾಗಿದೆ. ಮುಸ್ಲಿಂ ಮಹಿಳೆಯರ ಶಾಪ ವಿಮೋಚನೆ ಮಾಡಿದ ಸುಪ್ರೀಂಕೋರ್ಟ್‌ಗೆ ಅಭಿನಂದನೆಗಳು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News