ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವ: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಮಗ್ರ ಪ್ರಶಸ್ತಿ

Update: 2017-08-22 15:56 GMT

ಉಡುಪಿ, ಆ.22: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಅಜ್ಜರ ಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಪರ್ಕಳ ಲಯನ್ಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಕಾಲ ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸಮಗ್ರ ಪ್ರಶಸ್ತಿ ಯನ್ನು ಗೆದ್ದುಕೊಂಡಿದೆ.

ಅಜ್ಜರಕಾಡು ಪುರಭವನದಲ್ಲಿ ಮಂಗಳವಾರ ನಡೆದ ಸಮರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾ ಯಿತು. ಶಿವಮೊಗ್ಗದ ಕುವೆಂಪು ವಿವಿ ದ್ವಿತೀಯ ಹಾಗೂ ಮೈಸೂರು ವಿವಿ ತೃತೀಯ ಸ್ಥಾನವನ್ನು ಪಡೆದುಕೊಂಡವು. ಇದರಲ್ಲಿ ರಾಜ್ಯದ 20 ವಿಶ್ವ ವಿದ್ಯಾಲಯಗಳ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇತರ ಸ್ಪರ್ಧೆಗಳ ವಿವರ ಹೀಗಿದೆ: ಸಾಂಸ್ಕೃತಿಕ ಭಾವೈಕ್ಯತಾ ಜಾಥ: ಪ್ರ- ಕುವೆಂಪು ವಿವಿ, ದ್ವಿ- ಮಂಗಳೂರು ವಿವಿ, ತೃ- ಬೆಂಗಳೂರು ರಾಜೀವ ಗಾಂಧಿ ವಿಜ್ಞಾನ ವಿವಿ. ಸುಗಮ ಸಂಗೀತ(ವೈಯಕ್ತಿಕ): ಪ್ರ- ಬೆಳಗಾವಿ ರಾಣಿ ಚೆನ್ನಮ್ಮ ವಿವಿಯ ಸಬೀನ ಹಲಗಿ, ದ್ವಿ- ಧಾರವಾಡ ಕರ್ನಾಟಕ ವಿವಿಯ ಗಣಪತಿ ಎಸ್.ಲಮಾಣಿ, ರಾಜೀವ ಗಾಂಧಿ ವಿವಿಯ ದೀಕ್ಷಿತ್. ಗುಂಪು: ಪ್ರ- ಕುವೆಂಪು, ದ್ವಿ- ಬೀದರ್ ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿವಿ, ತೃ- ಮಂಗಳೂರು.

ಪ್ರಬಂಧ ಸ್ಪರ್ಧೆ: ಪ್ರ- ಮಂಗಳೂರು ವಿವಿಯ ಶಕೀಲ, ದ್ವಿ- ದಯಾನಂದ ಸಾಗರ ವಿವಿಯ ಯಶವಂತ ಎಚ್.ಆರ್., ತೃ- ಬೆಂಗಳೂರು ವಿವಿಯ ವಜ್ರಾಂಕಿತ. ಚರ್ಚಾ ಸ್ಪರ್ಧೆ: ಮಂಗಳೂರು ವಿವಿಯ ಪ್ರಸಾದ್, ದ್ವಿ- ಬೆಂಗ ಳೂರು ಕೃಷಿ ವಿವಿಯ ಅಭಿಷೆ ಕೆ.ಆರ್., ತೃ- ದಯಾನಂದ ಸಾಗರದ ರೋಹನ್ ವಿಜಯಪುರ. ಪ್ರಹಸನ: ಪ್ರ- ಮಂಗಳೂರು ವಿವಿ, ದ್ವಿ- ಕುವೆಂಪು- ತೃ- ಬೆಂಗಳೂರು ಗಾರ್ಡನ್ ಸಿಟಿ ವಿವಿ.

ರಸಪ್ರಶ್ನೆ: ಪ್ರ- ಬೆಳಗಾವಿ ವಿಶ್ವೇಶರಯ್ಯ ತಾಂತ್ರಿಕ ವಿವಿಯ ಬಸವರಾಜು ಕೆ. ಮತ್ತು ಮಧು ನಾಯ್ಕ, ದ್ವಿ- ಮಂಗಳೂರು ವಿವಿಯ ಶಶಾಂಕ್ ಆರ್. ಉತ್ಪಾತ್ ಮತ್ತು ಶ್ರೀದೇವಿ, ತೃ- ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿವಿಯ ಆಲಮನಿ ಸಚಿನ್ ಮತ್ತು ಸ್ವರೂಪ್. ನೃತ್ಯ(ವೈಯಕ್ತಿಕ): ಪ್ರ- ಮಂಗಳೂರು ವಿವಿಯ ಚೈತ್ರಾ, ದ್ವಿ- ಕುವೆಂಪು ವಿವಿಯ ಕಾವ್ಯ ಎಸ್., ತೃ- ಪದವಿ ಪೂರ್ವ ಶಿಕ್ಷಣ ಇಲಾಖೆಯ ಪೂಜಾ ಬಿ.ಎಸ್. ವಸ್ತು ಪ್ರದರ್ಶನ: ಪ್ರ- ಮಂಗಳೂರು ವಿವಿ, ದ್ವಿ- ಕುವೆಂಪು, ತೃ- ಕೃಷಿ ಎ.ವಿ.ಧಾರವಾಡ.

ಸಮಾರೋಪ ಸಮಾರಂಭ: ಎನ್‌ಎಸ್‌ಎಸ್‌ನ ಕೇಂದ್ರ ಪ್ರಾದೇಶಿಕ ನಿರ್ದೇಶಕ ಪೂಜಾರ್ ಸಮಾರೋಪ ಭಾಷಣ ಮಾಡಿ, ಎನ್ನೆಸ್ಸೆಸ್ ವಿದ್ಯಾರ್ಥಿ ಗಳು ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಬೇಕು. ಇಲ್ಲಿ ಶಿಸ್ತಿಗೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಸೇವಾ ಮನೋಭಾವ ಮತ್ತು ಶಿಸ್ತಿನಿಂದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ದೇಶದ ಸಂಸ್ಕೃತಿಯನ್ನು ಬೆಳೆಸಿ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ನಿರ್ದಿಷ್ಟ ಗುರಿ ಹೊಂದಿ ರಾಷ್ಟ್ರದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು.

ಅಧ್ಯಕ್ಷತೆಯನ್ನು ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ್ ರಾವ್, ಎನ್ನೆಸ್ಸೆಸ್ ಯೋಜನಾಧಿಕಾರಿ ಜಯ ಲಕ್ಷ್ಮಿ, ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.

ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಪದನಿಮಿತ್ತ ಸರಕಾರದ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ, ಸ್ವಾಗತಿಸಿದರು. ಯುವ ಸಬಲೀಕರಣ ಮತ್ತ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ವಂದಿಸಿದರು. ಪ್ರಾಧ್ಯಾಪಕ ಪ್ರೊ. ಪ್ರಕಾಶ್ ಕ್ರಮಧಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News