ಜಿಎಸ್‌ಟಿಯಿಂದ ಮೀನುಗಾರರಿಗೆ ಸಮಸ್ಯೆ: ಇಂಟೆಕ್

Update: 2017-08-22 16:26 GMT

ಉಡುಪಿ, ಆ.22: ಮೀನುಗಾರಿಕಾ ಸಂಸ್ಕರಣೆಗೆ ಬಳಸುವ ಎಲ್ಲ ರೀತಿಯ ಮಂಜುಗಡ್ಡೆಗಳಿಗೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿರುವುದು ಸಾಂಪ್ರದಾಯಿಕ ಹಾಗೂ ಆಳ ಸಮುದ್ರ ಮೀನುಗಾರರಿಗೆ ತೀರಾ ತೊಂದರೆಯಾಗಿದೆ ಎಂದು ಕಾಂಗ್ರೆಸ್ ಕಾರ್ಮಿಕ ಸಂಘಟನೆ ಆರೋಪಿಸಿದೆ.

ಮೀನುಗಾರಿಕೆಗೆ ಬಳಸುವ ಹುಕ್‌ಗಳು, ಸೀಸಗಳು, ರಾಡ್‌ಗಳು, ನೈಲಾನ್ ನೂಲ್‌ಗಳಿಗೆ ಶೇ.12ರಷ್ಟು ಹಾಗೂ ರೋಪ್‌ಗಳಿಗೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಈ ಮೊದಲು ರಾಜ್ಯ ಸರಕಾರವು ಈ ಉತ್ಪನ್ನಗಳಿಗೆ ವ್ಯಾಟ್ ವಿಧಿಸುತ್ತಿರಲಿಲ್ಲ. ಆದುದರಿಂದ ಕೇಂದ್ರ ಸರಕಾರವು ಈ ಬಗ್ಗೆ ಪುನರ್ ಪರಿ ಶೀಲಿಸಿ ಈ ಉತ್ಪನ್ನಗಳ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ರದ್ದುಮಾಡ ಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್ ಎನ್. ಕೋಟ್ಯಾನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News