ಟ್ರಂಪ್ ಕುಟುಂಬ ರಕ್ಷಿಸಲು ಹಣವಿಲ್ಲ: ಗುಪ್ತಚರ ಮುಖ್ಯಸ್ಥ

Update: 2017-08-22 17:14 GMT

ವಾಶಿಂಗ್ಟನ್, ಆ. 22: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬ ಸದಸ್ಯರ ರಕ್ಷಣೆಯ ಹೊಣೆ ಹೊತ್ತಿರುವ ಅಮೆರಿಕ ಗುಪ್ತಚರ ಸಂಸ್ಥೆ ತನ್ನ ಸಿಬ್ಬಂದಿಗೆ ಸಂಬಳ ನೀಡಲು ಹಣವಿಲ್ಲದೆ ಪರದಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಅದರ ಏಜಂಟ್‌ಗಳು ರಾಜೀನಾಮೆ ನೀಡುತ್ತಿದ್ದಾರೆ ಹಾಗೂ ಆರ್ಥಿಕ ವರ್ಷ ಮುಗಿಯಲು ಇನ್ನೂ ನಾಲ್ಕು ತಿಂಗಳಿಗೂ ಹೆಚ್ಚಿನ ಅವಧಿಯಿರುವುದರಿಂದ ಈ ಅವಧಿಯಲ್ಲಿ ಉಳಿದ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುವುದಿಲ್ಲ ಎಂದು ಸೀಕ್ರೆಟ್ ಸರ್ವಿಸ್‌ನ ನಿರ್ದೇಶಕ ರ್ಯಾಂಡಾಲ್ಫ್ ಟೆಕ್ಸ್ ಅಲೆಸ್ ‘ಯುಎಸ್‌ಎ ಟುಡೆ’ಗೆ ತಿಳಿಸಿದರು.

ಟ್ರಂಪ್‌ರ ಬೃಹತ್ ಕುಟುಂಬದ ಗಾತ್ರ ಮತ್ತು ಅದರ ಸದಸ್ಯರ ಹೆಚ್ಚಿನ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸೀಕ್ರೆಟ್ ಸರ್ವಿಸ್‌ಗೆ ನಿಗದಿಪಡಿಸಿರುವ ಮೊತ್ತ ಖರ್ಚಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News