ಮುಂಬರುವ ಸರಕಾರದಲ್ಲಿ ದಲಿತರಿಗೆ ನ್ಯಾಯ ಸಿಗಲ್ಲ: ಸುಂದರ ಮಾಸ್ತರ್

Update: 2017-08-22 17:14 GMT

ಕಾರ್ಕಳ, ಆ. 22: ಮನುಷ್ಯನಿಗೆ ಬದುಕಲು ಅತ್ಯಗತ್ಯವಾಗಿ ಭೂಮಿ ಬೇಕು. ಭೂಮಿ ನೀಡುವಂತಹ ಕೆಲಸವು ಈ ಸರಕಾರದಿಂದ ಸಿಗುತ್ತಿದೆ. ಈಗೀನ ಸರಕಾರದ ಅವಧಿ ಮುಗಿಯುವ ಮುನ್ನವೇ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ವಾಸ್ತವ್ಯದ ಭೂಮಿ ಪಡೆದುಕೊಳ್ಳಲು ಅವಕಾಶವಿದ್ದು, ಸಂಘಟನೆಗಳು ನಮ್ಮ ಸಮುದಾಯದ ಜನತೆಗೆ ಈ ಬಗ್ಗೆ ತಿಳಿಯಪಡಿಸುವ ಕೆಲಸ ಮಾಡಬೇಕು. ಮುಂಬರುವ ಸರಕಾರಗಳು ಬಂಡವಾಳಶಾಹಿ ಸರಕಾರಗಳಾಗಿದ್ದು, ಅಲ್ಲಿ ದಲಿತರಿಗೆ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.

ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಕಳ ತಾಲೂಕು ಶಾಖೆ ವತಿಯಿಂದ ತಾ.ಪಂ.ಸಭಾಭವನದಲ್ಲಿ ಮಂಗಳವಾರ ನಡೆದ ಸರಕಾರದ ವಿವಿಧ ಇಲಾಖೆಯ ಇಲಾಖಾಕಾರಿಗಳಿಂದ ಪ.ಜಾತಿ/ಪ.ಪಂ.ದವರಿಗೆ ಇಲಾಖಾವಾರು ಮಾಹಿತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅವರು ಸರಕಾರವು ಕಳೆದ ಬಜೆಟ್‌ನಲ್ಲಿ ದಲಿತರ ಶ್ರೇಯೋಭಿವೃದ್ದಿಗಾಗಿ 18 ಸಾವಿರ ಕೋಟಿ ರೂ. ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕಾದಿರಿಸಿದೆ. ಆದರೆ ಆ ಅನುದಾನ ಪೂರ್ಣ ಪ್ರಮಾಣದಲ್ಲಿ ವಿನಿಯೋಗವಾಗುತ್ತಿಲ್ಲ. ಸರಕಾರದದಿಂದ ಸಿಗುವ ಸವಲತ್ತಗಳನ್ನು ಶಾಸಕರು ತಾವೇ ಕೈಯಿಂದ ನೀಡುವ ಹಾಗೆ ಕಟೌಟ್ ಗಳನ್ನು ಅಳವಡಿಸಿ ತಮ್ಮ ಸಾದನೆ ಎಂದು ಬಿಂಬಿಸುತ್ತಿದ್ದಾರೆ. ದಲಿತ ಸಮುದಾಯದ ಜನತೆಗೆ ವಿವಿಧ ಸವಲತ್ತುಗಳು ದೊರೆಯುವ ಅವಕಾಶವಿದ್ದರೂ, ಮಾಹಿತಿ ಕೊರತೆಯಿಂದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದರು. ದಲಿತ ಸಮುದಾಯದ ಜನತೆ ಉದ್ಯಮದಲ್ಲೂ ಮುಂದುವರೆಯುವಂತಾದರೆ, ಮೀಸಲಾತಿಯನ್ವಯ ಎಲ್ಲಾ ಸವಲತ್ತುಗಳು ನಮಗೆ ದೊರೆಯುವಂತಾದರೆ ನಮ್ಮ ಸಮುದಾಯದಲ್ಲಿ ಪರಿವರ್ತನೆ ಸಾಧ್ಯ ಎಂದರು.

ಕಾರ್ಕಳದ ನೇತ್ರತಜ್ಞರಾದ ಡಾ.ಜಿ.ಪ್ರೇಮದಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಕಳೆದರೂ, ದಲಿತರು ಸವಲ ತ್ತುಗಳನ್ನು ಪಡೆಯಲು ಇಂತಹ ಮಾಹಿತಿ ಶಿಬಿರಗಳ ಆಯೋಜನೆ ಮಾಡಬೇಕಾಗಿರುವುದು ಸಮುದಾಯದ ಸುಧಾರಣೆ ಯಾವ ಹಂತದಲ್ಲಿ ನಡೆದಿದೆ ? ಎನ್ನುವುದನ್ನು ತಿಳಿದುಕೊಳ್ಳಬಹುವುದು. ಸರಕಾರಿ ಅಕಾರಿಗಳು ತಮ್ಮ ಸೇವಾ ಅವಯಲ್ಲಿ ದಲಿತರ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿಕೊಡಬೇಕು ಎಂದು ವಿನಂತಿಸಿಕೊಂಡರು.

ಉಪ ತಹಶೀಲ್ದಾರ್ ಶಿವರಾಮ್, ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ, ಕಾರ್ಕಳ ಪುರಸಭೆ ಮ್ಯಾನೇಜರ್ ಮಂಜುನಾಥ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಹೂವಪ್ಪ ಮಾಸ್ತರ್, ಅಣ್ಣಪ್ಪ ಮಾಸ್ತರ್ ಮುದ್ರಾಡಿ, ಶ್ರೀಧರ ಬೈಲೂರು, ತಾಲೂಕು ಶಾಖೆ ಸಂಘಟನಾ ಸಂಚಾಲಕ ಕೆ.ಸಂಜೀವ, ನ್ಯಾಯವಾದಿ ರಾಘವ, ಮಹಿಳಾ ಸಾಂತ್ವನ ಕೇಂದ್ರದ ಸುನೀತಾ ಸುಧಾಕರ್, ದೇವು ಹೆಬ್ರಿ, ಮುಂಡ್ಕೂರು ಪ.ಪೂ.ಕಾಕೇಜು ಉಪನ್ಯಾಸ ದೇವದಾಸ್, ಜಿ.ಪಂ.ಮಾಜಿ ಸದಸ್ಯ ಎನ್.ಬಿ.ಬಾಬು, ತಾ.ಪ.ಸದಸ್ಯ ಹರೀಶ್ಚಂದ್ರ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಣ್ಣಪ್ಪ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News