ಹಲ್ಲೆ ಪ್ರಕರಣ: ಆರೋಪಿಯ ಬಂಧನ

Update: 2017-08-22 17:16 GMT

ಪುತ್ತೂರು, ಆ. 22: ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ 38 ವರ್ಷಗಳ ಹಿಂದೆ ನಡೆದಿದ್ದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಮಂಗಳವಾರ ಬಂಧಿಸಿ  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕಾವು ಸಮೀಪದ ಬಂಡಿಜಾಲು ಚೀಚಕಂಡ ನಿವಾಸಿ  ಸಿ.ಎಚ್.ಅಬ್ದುಲ್ ಖಾದರ್ ಬಂಧಿತ ಆರೋಪಿ. 1979ರಲ್ಲಿ ಅಬ್ದುಲ್ ಕುಂಞಿ ಎಂಬವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ 14 ಮಂದಿ ಆರೋಪಿಗಳ ಪೈಕಿ ಎರಡನೇ ಆರೋಪಿಯಾಗಿದ್ದ ಸಿ.ಎಚ್.ಅಬ್ದುಲ್ ಖಾದರ್ ಘಟನೆಯ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಬಹರೈನ್‌ಗೆ ತೆರಳಿ, ಅಲ್ಲಿಯೇ ಉದ್ಯೋಗ ಮಾಡಿಕೊಂಡು ವಾಸ್ತವ್ಯವಿದ್ದರು.

2010ರಲ್ಲಿ ಸ್ವದೇಶಕ್ಕೆ ಮರಳಿದ ಅಬ್ದುಲ್ ಖಾದರ್ ವಿಳಾಸ ಬದಲಾಯಿಸಿಕೊಂಡು ಮಾಡ್ನೂರು ಗ್ರಾಮದ ಕಾವು ಸಮೀಪದ ಬಂಡಿಜಾಲು ಎಂಬಲ್ಲಿ ವಾಸ್ತವ್ಯವಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಪುತ್ತೂರು ನಗರ ಠಾಣೆಯ ಎಸ್‌ಐ ಒಮನಾ, ಎಎಸ್‌ಐ ಪಾಂಡುರಂಗ, ಸಿಬ್ಬಂದಿಯಾದ ಪರಮೇಶ್ವರ, ಜಯರಾಮ, ಕೃಷ್ಣಪ್ಪ, ಪ್ರಶಾಂತ್ ರೈ, ಮೋಹನ್ ಅವರು ಮಂಗಳವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News