ಶೋಯೆಬ್ ಶೇಕ್‌ಗೆ ಅತ್ಯುತ್ತಮ ಫೋಟೋಗ್ರಾಫರ್ ಪ್ರಶಸ್ತಿ

Update: 2017-08-22 17:44 GMT

ಮಂಗಳೂರು, ಆ.22: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯನ್ ಇಂಟರ್‌ನ್ಯಾಷನಲ್ ಮೋಡೆಲ್ ಯುನೈಟೆಡ್ ನೇಷನ್ಸ್ (ಐಐಎಂಯುಎನ್) ಯುಎಸ್‌ಎ 2017 ಸಮ್ಮೇಳನದಲ್ಲಿ ನಗರದ ಜಪ್ಪಿನಮೊಗರಿನ ಯೆನೆಪೋಯ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಶೋಯೆಬ್ ಶೇಕ್ ಇಂಟರ್‌ನ್ಯಾಷನಲ್ ಪ್ರೆಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಫೋಟೋಗ್ರಾಫರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ನ್ಯೂಯಾರ್ಕ್‌ನ ಯುನೈಟೆಡ್ ನೇಷನ್ಸ್‌ನ ಕೇಂದ್ರ ಕಚೇರಿಯಲ್ಲಿ ಆಗಸ್ಟ್ 15ರಿಂದ 18ರವರೆಗೆ ನಡೆದ ಸಮ್ಮೇಳನದಲ್ಲಿ ಯೆನೆಪೋಯ ಶಾಲೆಯ ಆರು ಮಂದಿ ವಿದ್ಯಾರ್ಥಿಗಳು ಶಿಕ್ಷಕಿ ವೆುರ್ಸಿ ರೇಗೋ ಜತೆ ಭಾಗವಹಿಸಿದ್ದರು.

10ನೆ ತರಗತಿಯ ಶೋಯೆಬ್ ಶೇಕ್, 9ನೆ ತರಗತಿಯ ಅಂಜಲಿ ಮರಿಯಾ ಆಗಸ್ಟಿನ್, ಕ್ಯಾರಲಿನ್ ಕ್ಯಾಸ್ತಲಿನೊ, ಧ್ರುವ್ ಕೆ. ಶಾ, 8ನೆ ತರಗತಿಯ ಇಲಾನ್ ಇರ್ಫಾನ್, ವೈಷ್ಣವಿ ರಾವ್ ಐಐಎಂಯುಎನ್‌ನಲ್ಲಿ ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಯೆನೆಪೋಯ ವಿದ್ಯಾರ್ಥಿಗಳ ತಂಡ ಬೆಲ್ಜಿಯಂ ರಾಷ್ಟ್ರದ ಪಾರ್ಲಿಮೆಂಟ್ ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಈ ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ವಿಚಾರಗಳ ಕುರಿತಂತೆ ಟೀಕೆ ಟಿಪ್ಪಣಿಗಳ ಜತೆ ತಮ್ಮ ವಾದ ಪ್ರತಿವಾದಗಳನ್ನು ಮಂಡಿಸುವ ಮೂಲಕ ಅಂತಾರಾಷ್ಟ್ರೀಯವಾಗಿ ಪ್ರತಿಭಾ ಪ್ರದರ್ಶನ ಹಾಗೂ ಶೈಕ್ಷಣಿಕ ಪ್ರವಾಸದ ಅನುಭವನ್ನು ಪಡೆಯಲು ಈ ವೇದಿಕೆಯನ್ನು ಕಲ್ಪಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News