ಮತ್ತೆ ಭೂ ಅವ್ಯವಹಾರದ ಸುಳಿಯಲ್ಲಿ ವಾದ್ರಾ

Update: 2017-08-22 18:05 GMT

ಜೈಪುರ, ಆ. 22: ಉದ್ಯಮಿ ರಾಬರ್ಟ್ ವಾದ್ರಾ ಅವರ ಸಂಸ್ಥೆ ಸ್ಕೈಲೈನ್ ಭಾಗಿಯಾಗಿರುವ ನಾಲ್ಕು ಪ್ರಕರಣ ಸೇರಿದಂತೆ ಬಿಕೇನರ್‌ನಲ್ಲಿನ 18 ಭೂ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ನಡೆಸಲು ರಾಜಸ್ಥಾನ ಸರಕಾರ ಸಿಬಿಐಗೆ ಶಿಫಾರಸು ಮಾಡಿದೆ ಎಂದು ಮಂಗಳವಾರ ಗೃಹಸಚಿವ ಗುಲಾಬ್ ಚಂದ್ ಕಟರಿಯಾ ಹೇಳಿದ್ದಾರೆ.

ಈ ಪ್ರಕರಣಗಳನ್ನು ಸಿಬಿಐಗೆ ತನಿಖೆ ಕಳುಹಿಸಲು ಆಗಸ್ಟ್ 17ರಂದು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಾದ್ರಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ.

ಕಳೆದ ವರ್ಷ ರಾಜಸ್ಥಾನ ಪೊಲೀಸರು ವಾದ್ರಾರನ್ನು ಆರೋಪ ಮುಕ್ತಗೊಳಿಸಿದ್ದರು. ನಂಬಿಕೆಗೆ ಅರ್ಹರಾದ ವಾದ್ರಾ ಅವರಿಗೆ ವಂಚಿಸಲಾಗಿದೆ. ಅವರು ಸುವ್ಯಕ್ತವಾಗಿ ವಂಚನೆಯ ಬಲಿಪಶು ಎಂದು ಪೊಲೀಸರು ಹೇಳಿದ್ದರು.

ವಾದ್ರಾ ಅವರ ಕಂಪೆನಿಗೆ ಸಂಬಂಧಿಸಿದ 4 ಭೂ ಅವ್ಯವಹಾರ ಪ್ರಕರಣ ಸೇರಿದಂತೆ 18 ಪ್ರಕರಣಗಳ ಎಫ್‌ಐಆರ್ ಅನ್ನು ಸಿಬಿಐ ಪರಿಶೀಲಿಸಬೇಕೆಂದು ನಾವು ನಿರ್ಧರಿಸಿದ್ದೇವೆ. ಯಾಕೆಂದರೆ, ಈ ತುಂಡು ಭೂಮಿಗಳು ನಕಲಿ ದಾಖಲೆಗಳಿಂದ ಹಲವು ಬಾರಿ ಮಾರಾಟವಾಗಿವೆ ಎಂದು ಕಟಾರಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News