×
Ad

ಕಲಾವಿದೆ ತಾರಾ ಎಸ್.ರಾವ್ ನಿಧನ

Update: 2017-08-22 23:50 IST

ಮುಂಬೈ, ಆ.22: ಬೆಂಗಳೂರಿನ ಟೂರಿಸ್ಟ್ ಹೋಟೆಲಿನ ಮಾಲಕರಾದ ಪಿ.ವಾದಿರಾಜ್ ಮತ್ತು  ಜಯಲಕ್ಷ್ಮೀ  ಅವರ ಪುತ್ರಿ, ಮಂಗಳೂರು ಸುರತ್ಕಲ್ ಬಾಳ ಅಲ್ಲಿನ ಮೂಲ ನಿವಾಸಿ, ಸದ್ಯ ಕಾಂಜೂರುಮಾರ್ಗ್ ಪಶ್ಚಿಮದ ಗ್ರೇಟ್‌ಈಸ್ಟರ್ನ್ ಗಾರ್ಡನ್ಸ್ ಅಪಾರ್ಟ್‌ಮೆಂಟ್‌ನ ನಿವಾಸಿ, ಮಯೂರಿ ನರ್ತಕಿ-ಅಪ್ರತಿಮ ಕಲಾವಿದೆ ಗೋಕುಲ ಕಲಾಶ್ರೀ ಬಿರುದಾಂಕಿತ ತಾರಾ ಎಸ್.ರಾವ್ (55) ಇಂದಿಲ್ಲಿ ಮುಂಬೈ ಉಪನಗರದ ಭಾಂಡೂಪ್ ನಲ್ಲಿ ನಿಧನರಾದರು.

ಅವರು ಪತಿ, ಪುತ್ರ, ಪುತ್ರಿ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಮಾಹಾರಾಣಿ ಕಾಲೇಜ್‌ನಿಂದ ಬಿಎ ಪದವೀಧರೆ, ತನ್ನ ಆರನೇ ವಯಸ್ಸಿನಿಂದಲೇ ಪ್ರಸಿದ್ಧ ಗುರುಗಳಿಂದ ಸಂಗೀತ ನೃತ್ಯಾಭ್ಯಾಸ ಮಾಡುತ್ತಾ ಕರ್ನಾಟಕ ಸಂಗೀತ, ಭರತನಾಟ್ಯ ಮತ್ತು ಓರಿಯಂಟಲ್ ನೃತ್ಯಗಳಲ್ಲಿ  ಪ್ರವೀಣತೆಯನ್ನು ಪಡೆದ ಈಕೆ ನಾಟ್ಯರಂಗ ಮಾತ್ರವಲ್ಲದೆ ಅಭಿನಯದಲ್ಲೂ ಅತ್ಯಂತ ಒಲವು ತೋರಿದ ಈಕೆ ಬಾಲ್ಯದಲ್ಲಿಯೇ ಹಲವಾರು ಪುರಸ್ಕಾರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ ಅಂದಿನ ರಾಷ್ಟ್ರಪತಿ ಸಂಜೀವ ರೆಡ್ಡಿ, ಕರ್ನಾಟಕದ ಮುಖ್ಯಮಂತ್ರಿ ದೇವರಾಜ ಅರಸು, ವೀರಪ್ಪ ಎಂ.ಮೊಲಿ ಮತ್ತು ಹಲವಾರು ಮಾಧೀಶರಿಂದ ಪುರಸ್ಕೃತರಾಗಿದ್ದಾರೆ.

ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿಯೇ ದೈವ ಬೀರು, ಸಾತ್ವಿಕ ಸ್ವಭಾವದ ಬಾಳ ಸುಬ್ರಹ್ಮಣ್ಯ ರಾವ್ ಅವರ ಧರ್ಮಪತ್ನಿಯಾಗಿ ದೆಹಲಿಯಲ್ಲಿ ಹನ್ನೊಂದು ವರ್ಷಗಳ ತನಕ ನೆಲೆಸಿ ಅಲ್ಲಿಯೂ ತನ್ನ ಕಲಾ ಸೇವೆ ಮಾಡಿದ ಹೆಗ್ಗಳಿಕೆ ಇವರಿಗಿದೆ.

ಕಳೆದ 22 ವರ್ಷಗಳಿಂದ ಮುಂಬೈಯಲ್ಲಿ ನೆಲೆಸಿ, ಶಿಕ್ಷಕಿ, ಸಂಗೀತ- ಭಜನಾ ಗಾಯಕಿಯಾಗಿ, ಸಮಾಜ ಸೇವಕಿಯಾಗಿ, ಉತ್ತಮ ಸಂಘಟಕಿಯಾಗಿ ಇಂದು ಮುಂಬೈ ಹಾಗೂ ಉಪನಗರಗಳಲ್ಲಿರುವ  ತುಳು ಕನ್ನಡ ಸಂಘ ಸಂಸ್ಥೆಗಳಲ್ಲಿ ಚಿರಪರಿಚಿತೆ ಆಗಿದ್ದಾರೆ.

ಮುಂಬೈಯ ಪ್ರತಿಷ್ಟಿತ ಬಿಎಸ್‌ಕೆ ಬಿ ಅಸೋಸಿಯೇಶನ್ (ಗೋಕುಲ) ಇದರ ಸಕ್ರೀಯ ಸದಸ್ಯೆಯಾಗಿ ದ್ದು ಹಲವಾರು ವರ್ಷಗಳ ತನಕ ಕಾರ್ಯಕಾರೀ ಸಮಿತಿಯಲ್ಲಿದ್ದುಕೊಂಡು ಗೋಕುಲ ಕಲಾವೃಂದದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಲಾವಿದರನ್ನು ಸಂಘಟಿಸಿ ಉತ್ತಮ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಹಕರಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಗೋಕುಲ ಕಲಾವೃಂದ ಭಜನಾ ಮಂಡಳಿಯನ್ನು ಸ್ಥಾಪಿಸಿ ಮಹಿಳೆಯರನ್ನು ಸಂಘಟಿಸಿ, ಮನೆ ಮನೆಯಲ್ಲಿ ಭಜನೆ' ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದ್ದರು. ಇವರ ಪ್ರತಿಭೆಯನ್ನು ಗುರುತಿಸಿ ಬೈಲೂರು ಬಾಲಚಂದ್ರ ರಾವ್ ರವು ತಮ್ಮ ಮಾತಾಪಿತರ ಸ್ಮರಣಾರ್ಥ ಬಿಎಸ್‌ಕೆಬಿಎ 'ಸ್ಥಾಪಿತ ಗೋಕುಲ ಕಲಾ ಶ್ರೀ' ಪ್ರಶಸ್ತಿ ಪಡೆದುಕೊಂಡಿದ್ದಾರೆ.

'ರಂಗಭೂಮಿ ಕಲಾವಿದೆಯಾಗಿ ಪ್ರಸಿದ್ಧ ದಿಗ್ದರ್ಶಕರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಪಾತ್ರವಹಿಸಿ ಉತ್ತಮ ನಟಿ' ಪ್ರಶಸ್ತಿ ಪಡೆದಿದ್ದಾರೆ.

ಉತ್ತಮ ಗೃಹಿಣಿಯಾಗಿ, ನಟಿಯಾಗಿ, ನೃತ್ಯ ಪಟುವಾಗಿ, ಯಕ್ಷಗಾನ ಕಲಾವಿದೆಯಾಗಿ, ಸಂಘಟಕಿಯಾಗಿ ಇವರು ಗಳಿಸಿದ ಪ್ರಶಸ್ತಿಗಳು ಹಲವಾರು. ಮುಂಬೈ ಮಾತ್ರವಲ್ಲದೆ ದೆಹಲಿ, ಮತ್ತು ಇತರ ರಾಜ್ಯದ ಸಂಘ ಸಂಸ್ಥೆಗಳೂ ಇವರನ್ನು ಗೌರವಿಸಿವೆ.

ತಾರಾ ಎಸ್. ರಾವ್ ನಿಧನಕ್ಕೆ ಸಂತಾಪ

ತಾರಾ ರಾವ್ ಅಗಲುವಿಕೆ ಮುಂಬೈಯ ಇಡೀ ಕಲಾರಂಗ ಸಂತಾಪ ಸೂಚಿಸಿದೆ. ಅವರೋರ್ವ ಸಾಮರಸ್ಯದ ಧ್ಯೋತಕವಾಗಿದ್ದು ಕಲಾರಂಗದ ಮಿನುಗುತಾರೆಯಾಗಿ ಜನಾನುರೆಣಿಸಿದ್ದರು. ತಾರಾ ನಿಧನ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಅಪಾರ ಸಂಖ್ಯೆಯ ಹಿತೈಷಿ ಕಲಾಭಿಮಾನಿಗಳು, ಸಂಘಸಂಸ್ಥೆಯ ಮುಖ್ಯಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್'ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ) ಸಂಸ್ಥೆಯ ಅಧ್ಯಕ್ಷ ಡಾ ಸುರೇಶ್ ಎಸ್.ರಾವ್ ಕಟೀಲು, ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಕೆ.ಪೋತಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ಥ ಮಂಡಳಿ, ಗೋಕುಲವಾಣಿಮಾಸಿಕದ ಗೌರವ ಸಂಪಾದಕ ಡಾ ವ್ಯಾಸರಾಯ ನಿಂಜೂರು, ರಾಷ್ಟ್ರೀಯ ಬಿಲ್ಲವ  ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಪೂರ್ವಾಧ್ಯಕ್ಷ ಎಲ್.ವಿ ಅವಿೂನ್, ಭಾರತ್ ಬ್ಯಾಂಕ್‌ನ ಉಕಾರ್ಯಾಧ್ಯಕ್ಷ ನ್ಯಾ ರೋಹಿಣಿ ಜೆ.ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬೈ ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ತೀಯಾ ಸಮಾಜ, ಮುಂಬೈ ಇದರ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ರಾಮರಾಜ ಕ್ಷತೀಯ ಸೇವಾ ಸಂಘ ಮುಂಬೈ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಹೆಚ್.ಬಿ.ಎಲ್ ರಾವ್, ಬಿ.ರಮಾನಂದ ರಾವ್, ಕಲೀನ, ಐ.ಕೆ ಪ್ರೇಮಾ ಎಸ್.ರಾವ್, ಕೃಷ್ಣ ಆಚಾರ್ಯ, ಪೆರ್ಣಂಕಿಲ ಹರಿದಾಸ್ ಭಟ್, ಎಸ್.ಎನ್ ಉಡುಪ, ಕೈರಬೆಟ್ಟು ವಿಶ್ವನಾಥ ಭಟ್, ಶ್ರೀ ಪೇಜಾವರ ಮಠ ಮುಂಬೈ ಶಾಖೆಯ ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಶ್ರೀ ಅದಮಾರು ಮಠದ ದಿವಾನ ಲಕ್ಷ್ಮಿ ನಾರಾಯಣ ಮುಚ್ಚಿತ್ತಾಂಯ ಪಡುಬಿದ್ರಿ ವಿ.ರಾಜೇಶ್, ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಇದರ ಅಜೆಕಾರು ಬಾಲಕೃಷ್ಣ ಶೆಟ್ಟಿ, ಪಂಡಿತ್ ನವೀನ್‌ಚಂದ್ರ ಆರ್.ಸನೀಲ್, ಹಿರಿಯ ಕಲಾವಿದರಾದ ಮೋಹನ್ ಮಾರ್ನಾಡ್, ಚಂದ್ರಪ್ರಭಾ ಸುವರ್ಣ, ಜ್ಯೂಲಿಯೆಟ್ ಪಿರೇರಾ, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ, ವಿಜಯಲಕ್ಷ್ಮೀ ಆರ್.ಪೂಜಾರಿ, ಕೆ.ಭೋಜರಾಜ್, ಕನ್ನಡ ವಿಭಾಗ ಮುಂಬೈ ಮುಖ್ಯಸ್ಥ ಡಾ ಜಿ.ಎನ್ ಉಪಾಧ್ಯ, ಡಾ ಸುನೀತಾ ಎಂ.ಶೆಟ್ಟಿ, ತೋನ್ಸೆ ಸಂಜೀವ ಪೂಜಾರಿ, ಎನ್.ಟಿ ಪೂಜಾರಿ ಸೇರಿದಂತೆ ನೂರಾರು ಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News