ಎಸ್.ಐ.ಒ ಉಳ್ಳಾಲ ವತಿಯಿಂದ ಮಕ್ಕಳಿಗಾಗಿ ಸೌಹಾರ್ದ ಫುಟ್ಬಾಲ್ ಪಂದ್ಯಾಟ

Update: 2017-08-22 18:29 GMT

ಮಂಗಳೂರು, ಆ. 22: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗೈನೈಝೇಶನ್ ಆಫ್ ಇಂಡಿಯಾ(ಎಸ್ ಐ ಒ) ಉಳ್ಳಾಲ ಘಟಕದ ವತಿಯಿಂದ 9 ರಿಂದ 14 ವರ್ಷದ ಮಕ್ಕಳಿಗಾಗಿ ಮರ್ ಹೂಂ ಇಸ್ಮಾಯೀಲ್ ಔಸಾಫ್ ರವರ ಸ್ಮರಣಾರ್ಥ 7 ಜನರ ಸೌಹಾರ್ದ ಫುಟ್ಬಾಲ್ ಟೂರ್ನಮೆಂಟ್ ಅನ್ನು ಆಯೋಜಿಸಲಾಯಿತು.

ಪಂದ್ಯಾಟವನ್ನು  ಮರ್ ಹೂಂ ಇಸ್ಮಾಯೀಲ್ ರವರ ತಂದೆ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಅಬ್ದುಲ್ ರಹಿಮಾನ್ ಕೋಟೆಕಾರ್ ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು "ಮಕ್ಕಳು ತಮ್ಮ ಪ್ರತಿಭೆಯನ್ನು ಗುರುತಿಸಬೇಕು ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಒಳ್ಳಯ ಹೆಸರು ತರುವವರಾಗಬೇಕು" ಎಂದರು. 

ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್ ನ ರಾಜ್ಯ ಸಲಹಾ ಸಮಿತಿಯ ಸದಸ್ಯ ಇರ್ಫಾನ್ ಕುದ್ರೋಳಿ ರವರು ಚೆಂಡು ಹೊಡೆಯುವ ಮೂಲಕ ಆಟಕ್ಕೆ ಚಾಲನೆ ನೀಡಿದರು.

ಪಂದ್ಯಾಟದಲ್ಲಿ ಬ್ರದರ್ಸ್ ಉಚ್ಚಿಲ ತಂಡವು ವಿಜಯಶಾಲಿಯಾಯಿತು. ಸ್ಮಾರ್ಟ್ ಸಿಟಿ ತಂಡ ರನ್ನರ್  ಪ್ರಶಸ್ತಿ ಗಳಿಸಿತು. ಉತ್ತಮ ಆಟಗಾರನಾಗಿ ಬ್ರದರ್ಸ್ ಉಚ್ಚಿಲ ತಂಡದ ಸಿನಾನ್ ಆಯ್ಕಾದರು. ಎಸ್.ಐ.ಒ ಜಿಲ್ಲಾ ಅಧ್ಯಕ್ಷರಾದ ತಲ್ಹಾ ಇಸ್ಮಾಯಿಲ್ ಮತ್ತು ಸಾಮಾಜಿಕ ಕಾರ್ಯಕರ್ತರಾದ ಅಬ್ದುಸ್ಸಲಾಂ ಸಿಎಚ್ ರವರು ಬಹುಮಾನಗಳನ್ನು ಮತ್ತು ಪದಕಗಳನ್ನು ನೀಡಿದರು.

ಎಸ್.ಐ.ಒ ಉಳ್ಳಾಲ ಘಟಕ ಅಧ್ಯಕ್ಷರಾದ ಅಶೀರುದ್ದೀನ್ ಆಲಿಯಾ ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ನಿಝಾಮ್ ಉಳ್ಳಾಲ್ ಮತ್ತು ಫುಟ್ಬಾಲ್ ಪಂದ್ಯಾಟದ ಸಂಚಾಲಕ  ಜವಾದ್ ಅತಿಥಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿದರು. ರೈಫಾನ್ ಕಿರಾಅತ್ ಪಠಿಸಿದರು. ತಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News