ಉಡುಪಿ: ಕರ್ಕಶ ಹಾರ್ನ್ ವಿರುದ್ಧ ಮುಂದುವರೆದ ಕಾರ್ಯಾಚರಣೆ
Update: 2017-08-23 18:47 IST
ಉಡುಪಿ, ಆ.23: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಅವರ ಆದೇಶದಂತೆ ಕರ್ಕಶ ಹಾರ್ನ್‌ಗಳ ವಿರುದ್ಧ ಉಡುಪಿ ಸಂಚಾರಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಇಂದು ಹಲವು ಖಾಸಗಿ ಬಸ್‌ಗಳಿಗೆ ದಂಡ ವಿಧಿಸಿ ಹಾರ್ನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕಿನ್ನಿಮುಲ್ಕಿಯಲ್ಲಿ ಸಂಜೆ 4ಗಂಟೆಯಿಂದ ರಾತ್ರಿವರೆಗೆ ಈ ಕಾರ್ಯಾಚರಣೆ ನಡೆದಿದ್ದು, ಇದರಲ್ಲಿ ಸಂಚಾರಿ ಪೊಲೀಸ್ ಠಾಣೆಯ ಇಬ್ಬರು ಎಸ್ಸೈ, ನಾಲ್ವರು ಎಎಸ್ಸೈ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಖಾಸಗಿ ಬಸ್ ಗಳು, ಶಾಲಾ ಕಾಲೇಜು ಬಸ್‌ಗಳು, ಲಾರಿ, ಟೆಂಪೊಗಳನ್ನು ಪರಿಶೀಲಿಸಿ, ಕರ್ಕಶ ಹಾರ್ನ್‌ಗಳನ್ನು ಪತ್ತೆ ಹಚ್ಚಿ ತಲಾ 100 ರೂ. ದಂಡ ವಿಧಿಸಿದ್ದಾರೆ.
ಆ.19ರಂದು ಉಡುಪಿ ನಗರ ಸಂಚಾರಿ ಹಾಗೂ ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 103 ಖಾಸಗಿ ಬಸ್‌ಗಳಲ್ಲಿದ್ದ ಕರ್ಕಶ ಹಾರ್ನ್ ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದರು. ಮುಂದೆಯು ಈ ಕಾರ್ಯಾಚರಣೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.