ಗುಜರಾತ್‌ನ ಕಛ್‌ನಲ್ಲಿ ಭೂಕಂಪ
Update: 2017-08-23 20:28 IST
ಅಹ್ಮದಾಬಾದ್,ಆ.23: ಗುಜರಾತ್‌ನ ಕಛ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಬುಧವಾರ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.1ರಷ್ಟಿತ್ತು.
ಜಿಲ್ಲೆಯ ಅಂಜಾರ್ ತಾಲೂಕಿನ ದುಧಾಯಿ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಸಂಭವಿಸಿದ ಈ ಭೂಕಂಪದಲ್ಲಿ ಯಾವುದೇ ಸಾವುನೋವು ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದು ಕಛ್ ಜಿಲ್ಲಾಧಿಕಾರಿ ರಮ್ಯಾ ಮೋಹನ ತಿಳಿಸಿದರು.
ಮಧ್ಯಾಹ್ನ 3.12ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು ದುಧಾಯಿಯಿಂದ ಉತ್ತರ-ಈಶಾನ್ಯದಲ್ಲಿ 16 ಕಿ.ಮೀ.ಅಂತರದಲ್ಲಿತ್ತು ಎಂದು ಗಾಂಧಿನಗರದ ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆಯ ಅಧಿಕಾರಿಯೋರ್ವರು ತಿಳಿಸಿದರು.