ಬಜಾಜ್ ಆಟೋದಿಂದ ‘ಸಿ.ಟಿ. ಇಲೆಕ್ಟ್ರಿಕಲ್ ಸ್ಟಾರ್ಟ್’ ಬಿಡುಗಡೆ

Update: 2017-08-23 15:36 GMT

ಮಂಗಳೂರು, ಆ.23: ಭಾರತದ ಮುಂಚೂಣಿಯಲ್ಲಿರುವ ಆಟೊ ಮೊಬೈಲ್ ಸಂಸ್ಥೆಯಾದ ಬಜಾಜ್ ಆಟೋ ಲಿ. ಸಂಸ್ಥೆಯ ಸಿ.ಟಿ. 100 ಇಲೆಕ್ಟ್ರಿಕಲ್ ಸ್ಟಾರ್ಟ್ ಬೈಕನ್ನು ನಗರದ ವೆಲೆನ್ಸಿಯಾದ ಸುಪ್ರಿಂ ಬಜಾಜ್ ಶೋರೂಮ್‌ನಲ್ಲಿ ಕಂಕನಾಡಿ ನಗರ ಠಾಣೆಯ ಎಎಸ್ಸೈ ರುಕ್ಮಯ ಕೆ. ಬುಧವಾರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಗ್ರಾಹಕರಿಗೆ ಉತ್ತಮ ಗುಣಮಟ್ಟದ ದ್ವಿಚಕ್ರವನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿರುವುದು ಸಂತಸದಾಯಕ. ಸಂಸ್ಥೆಯು ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಸಲುವಾಗಿ ಅತ್ಯುತ್ತಮ ಸೇವೆ ನೀಡಲಿ ಎಂದು ಆಶಿಸಿದರು.

ಸಂಸ್ಥೆಯ ಡಿಜಿಎಂ ಗುರುಪ್ರಸಾದ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಮೈಲೇಜ್ ನೀಡುವ ದ್ವಿಚಕ್ರ ವಾಹನವು ಅತ್ಯಾಕರ್ಷಕ ಬೆಲೆಗೆ ದೊರಕಲಿದೆ. ಇದಕ್ಕೆ ಸೆಲ್ಫ್ ಸ್ಟಾರ್ಟ್ ಕೊಟ್ಟಿರುವುದರಿಂದ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.

ಸಂಸ್ಥೆಯ ಜನರಲ್ ಮ್ಯಾನೇಜರ್ ಸುದರ್ಶನ್ ಭಟ್ ಮಾತನಾಡಿ, ಇದರಲ್ಲಿ ಎಕ್ಸ್‌ಟ್ರಾ ಲಾಂಗ್ 28 ಇಂಚಿನ ಸೀಟ್ ಇದ್ದು ಡ್ರೈವರ್ ಮತ್ತು ಸಹ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹೊಸ ಅವಿಷ್ಕಾರದ ಎಸ್‌ಎನ್‌ಎಸ್ ಸಸ್ಪೆನ್ಸನ್ ಹೊಂದಿದ್ದು, ಕಠಿಣ ರಸ್ತೆಗಳಲ್ಲಿ ಆರಾಮದಾಯಕವಾಗಿ ಓಡಲಿದೆ ಎಂದರು.

ಈ ಸಂದರ್ಭ ಮ್ಯಾನೇಜರ್ ಅಹ್ಮದ್ ಸಿದ್ದೀಕ್ ಉಪಸ್ಥಿತರಿದ್ದರು. ಸೇಲ್ಸ್ ಮ್ಯಾನೇಜರ್ ಯೋಗೀಶ್ ಸ್ವಾಗತಿಸಿ, ವಂದಿಸಿದರು.

ಸಿಟಿ 100 ಬೈಕ್ ಬ್ಲಾಕ್ ಸಿಲ್ವರ್- ರೆಡ್ ಡಿಕಾಲ್ಸ್, ಬ್ಲಾಕ್ ಸಿಲ್ವರ್- ಬ್ಲೂ ಡಿಕಾಲ್ಸ್ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ. 41,890 ರೂ. ಸ್ಪರ್ಧಾತ್ಮಕ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಬೈಕ್ ಆವಿಷ್ಕಾರಿತ 99.27 ಸಿಸಿ ಇಂಜಿನ್‌ನೊಂದಿಗೆ 8.2 ಬಿಎಚ್‌ಪಿ ಮತ್ತು ಎನ್‌ಎಂ ಟಾರ್ಕ್ ಹೊಂದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News