ಜುಗಾರಿ: ಒಂಭತ್ತು ಮಂದಿ ಬಂಧನ
ಉಡುಪಿ, ಆ.23: ಮಟ್ಕಾ ಜುಗಾರಿ ಆಟಕ್ಕೆ ಸಂಬಂಧಿಸಿದಂತೆ ಆ.22ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ಮೀನು ಮಾರ್ಕೆಟ್ ಬಳಿ ಬಿರ್ತಿ ಶಾಂತಿನಗರದ ಶ್ರೀನಿವಾಸ (53) ಮತ್ತು ಉಪ್ಪೂರು ಕೊಳಲಗಿರಿ ಎಂಬಲ್ಲಿ 1395ರೂ. ನಗದು ಸಹಿತ ಕೊಳಲಗಿರಿಯ ಸುಧಾಕರ ಪೂಜಾರಿ (57) ಹಾಗೂ ಆ.23ರಂದು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ತೂರು ಗ್ರಾಮದ ಸಂತೆಕಟ್ಟೆ ಬಸ್ ನಿಲ್ದಾಣದ ಬಳಿ ಕರ್ಜೆಯ ಹರಿಶ್ಚಂದ್ರ(46), ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಹಳೆ ಮೀನು ಮಾರ್ಕೆಟ್ ಬಳಿ 1270ರೂ. ಸಹಿತ ಕಟಪಾಡಿಯ ಹರೀಶ್ ದೇವಾಡಿಗ(42) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂದರ್‌ಬಾಹರ್: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಗ್ರಾಮದ ಕಂಬಳಗದ್ದೆ ಬಳಿ ಆ.23ರಂದು ಮಧ್ಯಾಹ್ನ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕೃಷ್ಣ ಪೂಜಾರಿ, ಪ್ರಶಾಂತ ಪೂಜಾರಿ, ದಿನೇಶ್ ಮೊಗವೀರ, ಪ್ರವೀಣ ಪೂಜಾರಿ, ವಾಸುದೇವ ಪೂಜಾರಿ ಎಂಬವರನ್ನು ಕೋಟ ಪೊಲೀಸರು ಬಂಧಿಸಿ, 810ರೂ. ನಗದು ವಶಪಡಿಸಿಕೊಂಡಿದ್ದಾರೆ.