ಉಡುಪಿ: ವೃತ್ತಿ ಮಾರ್ಗದರ್ಶನದ ಬಗ್ಗೆ ಉಪನ್ಯಾಸ

Update: 2017-08-23 16:52 GMT

ಉಡುಪಿ, ಆ.23: ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇದರ ಎನ್ನೆಸ್ಸೆಸ್ ಘಟಕ ಹಾಗೂ ರೋಟರಿ ಕ್ಲಬ್ ಉಡುಪಿ ಇವರ ಸಹಯೋಗದಲ್ಲಿ ದ್ವಿತೀಯ ಪಿ.ಯು.ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಮಣಿಪಾಲ ವಿವಿಯ ಬಾಲಕೃಷ್ಣ ಮದ್ದೋಡಿ ಅವರು ನೀಡಿದರು.

ವಿದ್ಯಾರ್ಥಿಗಳು ಯಾವ ರೀತಿಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ನಮ್ಮ ಸಾಮರ್ಥ್ಯಕ್ಕನುಗುಣವಾಗಿ ಯಾವ ವೃತ್ತಿಯನ್ನು ಪಡೆಯಬಹುದು ಅದಕ್ಕೆ ಬೇಕಾದ ತಯಾರಿ ಹೇಗೆ ಮಾಡಿಕೊಳ್ಳಬೇಕು, ವಿವಿದ ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆಗಳ ಕುರಿತಂತೆ ಮದ್ದೋಡಿ ಮಾಹಿತಿಗಳನ್ನು ನೀಡಿದರು.
ಇದರೊಂದಿಗೆ ಇಂಟರಾಕ್ಟ್ ಕ್ಲಬ್‌ನ ಪದಗ್ರಹಣವೂ ನಡೆಯಿತು. ನಾಯಕನಾಗಿ ರಾಕೇಶ್, ಕಾರ್ಯದರ್ಶಿಯಾಗಿ ಅನಿಲ್, ಕೋಶಾಧಿಕಾರಿಯಾಗಿ ಭಾರತಿ, ನಿರ್ದೇಶಕರಾಗಿ ಗ್ಯಾನಪ್ಪಾ, ದರ್ಶನ ಮತ್ತು ಸುಜಯ ಆಯ್ಕೆಯಾದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ವಿಘ್ನೇಶ್ವರ ಭಟ್ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಉಪಾದ್ಯಾಯ, ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಕಾರಂತ್, ಡಾ.ಸುರೇಶ್ ಶೆಣೈ, ಎನ್ನೆಸ್ಸೆಸ್ ಘಟಕ ಯೋಜನಾಧಿಕಾರಿ ಅನುರಾಧ ಹೆಚ್.ಎಂ. ಉಪಸ್ಥಿತರಿದ್ದರು.

ವಿದ್ಯಾರ್ಥಿ ಪದಾಧಿಕಾರಿಗಳಾದ ನಾಗರಾಜ್ ಸ್ವಾಗತಿಸಿ ಸುಜಯ ವಂದಿಸಿ ದರು. ಮಾಯವ್ವ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News