ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿ ಸಂಘ ಉದ್ಘಾಟನೆ
ಉಡುಪಿ, ಆ.23: ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇದರ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿ ಸಂಘವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಇತ್ತೀಚೆಗೆ ಉದ್ಘಾಟಿಸಿದರು.
ರಾಜ್ಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಚಿವನಾಗಿ ಈ ಸಂಘವನ್ನು ಉದ್ಘಾಟಿಸಲು ತನಗೆ ಹರ್ಷವಾಗುತ್ತಿದೆ. ಕಠಿಣ ಪರಿಶ್ರಮದಿಂದ ಶೇ. ನೂರರಷ್ಟು ಫಲಿತಾಂಶವನ್ನು ಕಾಲೇಜಿಗೆ ತರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಾಜ್ಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಚಿವನಾಗಿ ಈ ಸಂಘವನ್ನು ಉದ್ಘಾಟಿಸಲು ತನಗೆ ಹರ್ಷವಾಗುತ್ತಿದೆ. ಕಠಿಣ ಪರಿಶ್ರಮದಿಂದ ಶೇ.ನೂರರಷ್ಟು ಫಲಿತಾಂಶವನ್ನು ಕಾಲೇಜಿಗೆ ತರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಪ್ರಭಾರ ಡಿಡಿಪಿಯು ವಿಜಯಲಕ್ಷ್ಮೀ, ದಿನೇಶ್ ಪುತ್ರನ್, ಉದ್ಯಾವರ ನಾಗೇಶ್ ಕುಮಾರ್, ನಿಕಟ ಪೂರ್ವ ಪ್ರಾಂಶುಪಾಲ ರಮೇಶ್ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯಲಕ್ಷ್ಮೀ, ದಿನೇಶ್‌ಪುತ್ರನ್, ಉದ್ಯಾವರ ನಾಗೇಶ್ ಕುಮಾರ್, ನಿಕಟ ಪೂರ್ವ ಪ್ರಾಂಶುಪಾಲ ರಮೇಶ್ ಭಾಗವಹಿಸಿದ್ದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ವಿಘ್ನೇಶ್ ಭಟ್ ಸ್ವಾಗತಿಸಿದರೆ, ಎನ್ನೆಸ್ಸೆಸ್ ಯೋಜನಾಧಿಕಾರಿ ಅನುರಾಧ ಹೆಚ್.ಎಂ. ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಪ್ರೌಢಶಾಲಾ ಮುಖ್ಯಸ್ಥ ಸುರೇಶ ಭಟ್ ವಂದಿಸಿದರೆ, ಭಾರತಿ ಕಾರ್ಯಕ್ರಮ ನಿರೂಪಿಸಿದರು.