ಮಲ್ಪೆಯಲ್ಲಿ ಗಣೇಶನ ಮರಳು ಶಿಲ್ಪ ಕೃತಿ
Update: 2017-08-23 22:43 IST
ಮಲ್ಪೆ, ಆ.23: ಗಣೇಶ್ ಚತುರ್ಥಿಯ ಪ್ರಯಕ್ತ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಣಿಪಾಲದ ತ್ರಿವರ್ಣ ಆರ್ಟ್ ಸೆಂಟರಿನ ವಿದ್ಯಾರ್ಥಿಗಳು ಬುಧವಾರ ಮಲ್ಪೆಯ ಕಡಲ ತೀರದಲ್ಲಿ ಗಣೇಶನ ಮರಳ ಶಿಲ್ಪ ಕಲಾಕೃತಿಯನ್ನು ರಚಿಸಿದರು.
ನಾಲ್ಕು ಅಡಿ ಎತ್ತರ ಹಾಗೂ 10 ಅಡಿ ಅಗಲದ ಗಣೇಶ ಮತ್ತು ಮೂಷಿಕನ ಕಲಾಕೃತಿಯನ್ನು ಮರಳಿನಲ್ಲಿ ರಚಿಸಿ, ನೋ ಪೊಲ್ಯೂಶನ್ ಎಂಬ ಸಂದೇಶವನ್ನು ಬಿತ್ತರಿಸಲಾಯಿತು.
ಕಲಾವಿದ ಹರೀಶ್ ಸಾಗ ಅವರ ಮಾರ್ಗದರ್ಶನದಲ್ಲಿ ತ್ರಿವರ್ಣ ಕೇಂದ್ರದ ವಿದ್ಯಾರ್ಥಿಗಳಾದ ಪ್ರಸಾದ್ ಆರ್., ಸತೀಶ್ ಕುಲಾಲ್, ಸಂದೇಶ್ ಬೆಳಗ್ಗೆ 11 ಗಂಟೆಯಿಂದ ಸಂಜೆ 4ಗಂಟೆಯವರೆಗಿನ ಅವಧಿಯಲ್ಲಿ ಈ ಕಲಾಕೃತಿಯನ್ನು ರಚಿಸಿದರು.