×
Ad

ಕಾಲು ಜಾರಿ ಕೆರೆಗೆ ಬಿದ್ದು ಮೃತ್ಯು

Update: 2017-08-23 23:26 IST

ಬೆಳ್ತಂಗಡಿ, ಆ. 23:  ಸಿರಿಬೈಲು ನಿವಾಸಿ ಉದಯಕರ ಹೆಬ್ಬಾರ್ (62) ತಮ್ಮ ತೋಟದ ಕೆರೆಗೆ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.

ತೋಟದ ಕೆರೆಯಲ್ಲಿ ಹಾಕಲಾಗಿದ್ದ ಪಂಪಿನಲ್ಲಿ ನೀರು ಬರದಿದ್ದಾಗ ಕೆರೆಯ ಬಳಿಗೆ ತೆರಳಿದ ಇವರು ಫುಟ್‌ಬಾಲ್ ಅನ್ನು ಮೇಲೆತ್ತಲು ಪ್ರಯತ್ನಿಸಿದಾಗ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ತೋಟಕ್ಕೆ ಹೋದವರು ಹಿಂದಕ್ಕೆ ಬರದಿರುವುದನ್ನು ಗಮನಿಸಿದ ಮನೆಯವರು ಹುಡುಕಾಟ ನಡೆಸಿದಾಗ ಕೆರೆಗೆ ಬಿದ್ದು ಮೃತಪಟ್ಟಿರುವುದು ಪತ್ತೆಯಾಗಿದೆ. ಇವರ ಪುತ್ರ ಚಂದನ್ ನೀಡಿರುವ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News