×
Ad

ಆ.26: ಗುರುಪುರದಲ್ಲಿ ಅಧ್ಯಯನ ಶಿಬಿರ

Update: 2017-08-24 18:09 IST

ಮಂಗಳೂರು, ಆ.24: ಸುನ್ನಿ ಯುವಜನ ಸಂಘ ದ.ಕ.ಜಿಲ್ಲೆ ಇದರ ವತಿಯಿಂದ ಗುರುಪುರ ದಾರುಸ್ಸಲಾಂ ಜುಮಾ ಮಸೀದಿಯಲ್ಲಿ ಆ.26ರಂದು ಬೆಳಗ್ಗೆ 10:30ಕ್ಕೆ ಅಧ್ಯಯನ ಶಿಬಿರ ನಡೆಯಲಿದೆ.

ಸಮಸ್ತ ಕರ್ನಾಟಕ ಮುಶಾವರ ಅಧ್ಯಕ್ಷ ಎನ್‌ಪಿಎಂ ಝೈನುಲ್ ಆಬಿದೀನ್ ತಂಙಲ್ ದುಆ ಮಾಡಲಿದ್ದು, ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಉದ್ಘಾಟಿಸಲಿದ್ದಾರೆ. ಎಸ್‌ವೈಎಸ್ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಅಧ್ಯಕ್ಷತೆ ವಹಿಸಲಿದ್ದಾರೆ.

ಉಳ್‌ಹಿಯ್ಯತ್ ಎಂಬ ವಿಷಯದಲ್ಲಿ ಲಿಯಾವುದ್ದೀನ್ ಫೈಝಿ ಉಪನ್ಯಾಸ ನೀಡಲಿದ್ದಾರೆ. ವೇದಿಕೆಯಲ್ಲಿ ಗುರುಪುರ ದಾರುಸ್ಸಲಾಂ ಜುಮಾ ಮಸೀದಿಯ ಅಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ, ಮಸೀದಿಯ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಸಮಸ್ತ ಕರ್ನಾಟಕ ಮುಶಾವರರ ಉಪಾಧ್ಯಕ್ಷ ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಸೈಯದ್ ಬಾಷಾ ತಂಙಳ್, ಹಾಜಿ ಶರೀಫ್ ಫೈಝಿ ಕಡಬ, ಹಾಜಿ ಉಸ್ಮಾನ್ ಏರ್ ಇಂಡಿಯಾ, ಎಂ.ಎಸ್. ಹಾಜಿ ಅಬ್ದುಲ್ ಲತೀಫ್ ಮದರ್ ಇಂಡಿಯಾ, ಅಬ್ದುಲ್ ಮಜೀದ್ ದಾರಿಮಿ, ಮೊಯ್ದಿನ್ ಹಾಜಿ, ನೌಶಾದ್ ಹಾಜಿ ಸೂರಲ್ಪಾಡಿ, ಡಿ.ಎಸ್. ಹಾಜಿ ಶೇಖಬ್ಬ, ರಾಜ್ಯ ಮೀನುಗಾರಿಕಾ ನಿಗಮದ ನಿರ್ದೇಶಕ ಅಬ್ದುಲ್ ಅಝೀಝ್ ಬಾಷಾ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News