×
Ad

ಆ. 25ರಂದು ಎಲ್.ಐ.ಎಫ್.ನಿಂದ ಉಪನ್ಯಾಸ ಕಾರ್ಯಕ್ರಮ

Update: 2017-08-24 18:38 IST

ಮಂಗಳೂರು, ಆ. 24: ಲರ್ನ್ ಇಸ್ಲಾಮಿಕ್ ಫೌಂಡೇಶನ್ (ಎಲ್.ಐ.ಎಫ್.) ವತಿಯಿಂದ ಆ. 25ರಂದು ನಗರದ ಫಳ್ನೀರ್‌ನ ಇಂದಿರಾ ಆಸ್ಪತ್ರೆಯ ಬಳಿಯಿರುವ ದಾರುಲ್ ಇಲ್ಮ್ ಮದ್ರಸ ಸಭಾಂಗಣದಲ್ಲಿ ಸಾರ್ವಜನಿಕ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ರಾತ್ರಿ 8:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿ ‘ಕಾಲವು ಮತ್ತೊಂದು ಇಬ್ರಾಹೀಂ ಅವರ ಹುಡುಕಾಟದಲ್ಲಿ’ ಎಂಬ ವಿಚಾರವಾಗಿ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News