ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿ
ಮಂಗಳೂರು, ಆ. 24: ದ.ಕ. ಬಸ್ ಮಾಲಕರ ಸಂಘದ 36ನೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಹೊಟೇಲ್ ಕ್ವಾಲಿಟಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ವರದಿ ವಾಚಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಸುಚೇತನ್ ಜಿ. ಕಾವೂರು ಅವರು, ನಗರದಲ್ಲಿ ಸಂಚರಿಸುವ 345 ಸಿಟಿ ಬಸ್ಸುಗಳಲ್ಲಿ 2016-17ನೆ ಸಾಲಿನಲ್ಲಿ 3,417 ವಿದ್ಯಾರ್ಥಿಗಳಿಗೆ ರಿಯಾಯತಿ ದರದ ಪಾಸುಗಳನ್ನು ನೀಡಲಾಗಿದೆ. ವಿದ್ಯಾರ್ಥಿ ಸಮುದಾಯಕ್ಕೆ ಬಸ್ಸು ಮಾಲಕರು ಈವರೆಗೆ ಒಟ್ಟು 14,13,06,532.90 ರೂ.ಗಳ ರಿಯಾಯತಿ ರೂಪದಲ್ಲಿ ಕೊಡುಗೆ ನೀಡಲಾಗಿದೆ. ಅಲ್ಲದೆ, ವಿಕಲಚೇತನರು ಮತ್ತು ಆರ್ಥಿಕ ಹಿಂದುಳಿದವರಿಗೆ ಪೂರ್ಣ ಪ್ರಮಾಣದ ರಿಯಾಯತಿ ಪಾಸ್‌ಗಳನ್ನು ಸಂಘ ನೀಡಿದೆ ಎಂದು ಮಾಹಿತಿ ನೀಡಿದರು.
ಕೋಶಾಧಿಕಾರಿ ಸತೀಶ್ ತಲಪಾಡಿ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
2017-18ರ ಸಾಲಿಗೆ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಬಿ.ಪಿ.ದಿವಾಕರ್, ಪ್ರಧಾನ ಕಾರ್ಯದರ್ಶಿಯಾಗಿ ಸುಚೇತನ್ ಜಿ. ಕಾವೂರು, ಜೊತೆ ಕಾರ್ಯದರ್ಶಿಯಾಗಿ ರಾಮಚಂದ್ರ ಪಿಲಾರ್, ಕೋಶಾಧಿಕಾರಿಯಾಗಿ ಸತೀಶ್ ತಲಪಾಡಿ ಅವರನ್ನು ಅವಿರೋಧವಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ 48 ಮಂದಿಯನ್ನು ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ವಂದಿಸಿದರು.