ಬಂಟ್ಸ್ ಹಾಸ್ಟೆಲ್ ನಲ್ಲಿ ಸಾರ್ವಜನಿಕ ಗಣೇಶೋತ್ಸವ
Update: 2017-08-25 12:06 IST
ಮಂಗಳೂರು, ಆ. 25: ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರಿ ಗಣೇಶೋತ್ಸವ ಸಮಿತಿ, ಬಂಟ್ಸ್ ಹಾಸ್ಟೆಲ್ ಮಂಗಳೂರ ಇದರ 14ನೆ ವರ್ಷದ ಗಣೇಶೋತ್ಸವ ನಡೆಯಿತು.
ಈ ಸಂದರ್ಭ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಹಾಗು ಗಣಹೋಮ ನಡೆಯಿತು. ನಂತರ ಸಭಾ ಕಾರ್ಯಕಮದ ಉದ್ಘಾಟನೆಯನ್ನು ಕರ್ನಾಟಕ ಥಿಯೇಟರ್ಸ್ ಅಧ್ಯಕ್ಷ ಅಶೋಕ್ ಆಳ್ವ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಜಿತ್ ಕುಮಾರ್ ಮಾಲಡಿ, ನವೀನ್ ಚಂದ್ರ ಶೆಟ್ಟಿ, ಕ್ರಷ್ಣ ಪ್ರಸಾದ್ ಶೆಟ್ಟಿ, ಸುಂದರ್ ಶೆಟ್ಟಿ ರವಿರಾಜ್ ಶೆಟ್ಟಿ, ಆನಂದ ಶೆಟ್ಟಿ, ಆಶಾ ಜ್ಯೋತಿ ರೈ, ಸುಲಾತ ಶೆಟ್ಟಿ, ರವೀಂದ್ರನಾಥ ಶೆಟ್ಟಿ, ಮಂಜುನಾಥ ಬಂಡಾರಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ಮುಗಿದ ಬಳಿಕ ತೆನೆ ಹಬ್ಬ ನಡೆಯಿತು.