ಸ್ಯಾಮ್ಸಂಗ್ ಉತ್ತರಾಧಿಕಾರಿಗೆ 5 ವರ್ಷ ಜೈಲು
Update: 2017-08-25 14:26 IST
ಹೊಸದಿಲ್ಲಿ, ಆ.25: ಸ್ಯಾಮ್ಸಂಗ್ ನ ಉತ್ತರಾಧಿಕಾರಿ ಹಾಗೂ ದಕ್ಷಿಣ ಕೊರಿಯಾದ ಮೂರನೆ ಅತ್ಯಂತ ಶ್ರೀಮಂತ ವ್ಯಕ್ತಿ ಲೀ ಜೇ ಯೋಂಗ್ ಅವರ ಭ್ರಷ್ಟಾಚಾರ ಸಾಬೀತುಗೊಂಡ ಹಿನ್ನೆಲೆಯಲ್ಲಿ ಅವರಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ರಾಜಕೀಯ ಲಾಭಕ್ಕೋಸ್ಕರ ಪದಚ್ಯುತ ಅಧ್ಯಕ್ಷ ಪಾರ್ಕ್ ಜೇನ್ ಹೈ ಅವರ ಆಪ್ತ ಸ್ನೇಹಿತನ ಸಂಸ್ಥೆಗಳಿಗೆ ಲಂಚ ನೀಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಪಾರ್ಕ್ ಅವರಿಂದ ಲಾಭ ಪಡೆಯುವ ಉದ್ದೇಶದಿಂದ ಲೀ ಭಾರೀ ಲಂಚ ನೀಡಿದ್ದರು ಎಂದು ಎಂದು ನ್ಯಾಯಾಲಯ ಹೇಳಿದೆ.
ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಲೀ ಪರ ವಕೀಲರು ಮುಂದಾಗಲಿದ್ದಾರೆ ಎನ್ನಲಾಗಿದ್ದು, ದೇಶದ ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ಮುಂದಿನ ವರ್ಷ ನಿರ್ಧಾರ ಕೈಗೊಳ್ಳಲಾಗುತ್ತದೆ. 2009ರಲ್ಲಿ ಜೇ ಯೋಂಗ್ ಸ್ಯಾಮ್ ಸಂಗ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು