×
Ad

ಶ್ರೀಲಂಕಾ ಪ್ರಧಾನಿ ಕೊಲ್ಲೂರು ಭೇಟಿ ಆ.27ಕ್ಕೆ ಮುಂದೂಡಿಕೆ

Update: 2017-08-25 17:12 IST

ಉಡುಪಿ, ಆ. 25: ಶ್ರೀಲಂಕಾ ಪ್ರಧಾನಿ ರನಿಲಾ ವಿಕ್ರಮಶಿಂಘೆ ಅವರ ಆ. 26ರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ಭೇಟಿ ಕಾರ್ಯಕ್ರಮವನ್ನು ಆ. 27ಕ್ಕೆ ಮುಂದೂಡಲಾಗಿದೆ.

ಆ. 25ರಿಂದ 27ರವರೆಗೆ ಭಾರತ ಪ್ರವಾಸದಲ್ಲಿರುವ ಅವರು ಆ. 27 ರವಿವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ಹೊರಟು ಕುಂದಾಪುರ ತಾಲೂಕಿನ ಅರೆಶಿರೂರಿಗೆ ಆಗಮಿಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಮೂಕಾಂಬಿಕಾ ದೇವಾಲಯದ ಅತಿಥಿಗೃಹಕ್ಕೆ ಆಗಮಿಸಿ, 11:15 ರಿಂದ ಮಧ್ಯಾಹ 1 ಗಂಟೆಯವರೆಗೆ ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿರುವರು. ಬಳಿಕ 1:30ಕ್ಕೆ ಕೊಲ್ಲೂರಿನಿಂದ ಅರೆಶಿರೂರು ಹೆಲಿಪ್ಯಾಡ್‌ನಿಂದ ಬೆಂಗಳೂರಿಗೆ ತೆರಳಲಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News