ಬಾಬಾ ಗುರ್ಮಿತ್ ಬೆಂಬಲಿಗರ ಹಿಂಸಾಚಾರಕ್ಕೆ 7 ಬಲಿ
Update: 2017-08-25 17:40 IST
ಹೊಸದಿಲ್ಲಿ, ಆ.25; ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲ ಸಿಬಿಐನ ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬೆನ್ನಲ್ಲೆ ಉದ್ಭವಗೊಂಡ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ. ಹಿಂಸಾಚಾರದಲ್ಲಿ 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ,
ಬುಧವಾರದಿಂದಲೇ ಹರ್ಯಾಣ, ಪಂಜಾಬ್ ಹಾಗೂ ಚಂಢೀಗಡದಿಂದ ಸುಮಾರು 2 ಲಕ್ಷದಷ್ಟು ಗುರ್ಮಿತ್ ರಾಮ್ ಅನುಯಾಯಿಗಳು ಪಂಚಕುಲದಲ್ಲಿ ಜಮಾಯಿಸಿದ್ದರು.
ಪಂಜಾಬ್ ನ ಮೊಗಾದ ದಗ್ರೂ ಗ್ರಾಮದಲ್ಲಿ ರೈಲ್ವೆ ನಿಲ್ದಾಣವೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಮನ್ಸಾದಲ್ಲಿ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.