ಸಾಕ್ಷಿ ನಾಶದ ಬಗ್ಗೆ ಅಧಿಕೃತ ವರದಿ ಬಂದಿಲ್ಲ: ಸಚಿವ ಖಾದರ್
Update: 2017-08-25 18:33 IST
ಮಂಗಳೂರು, ಆ.25: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ನಾಶ ಆಗಿರುವ ಕುರಿತಂತೆ ಅಧಿಕೃತ ವರದಿ ಬಂದಿಲ್ಲ. ವಿರೋಧ ಪಕ್ಷ ಮುಖ್ಯಮಂತ್ರಿ ಯಶಸ್ಸಿನಿಂದ ತಳಮಳಗೊಂಡು ಇಂತಹ ಸಣ್ಣ ಪುಟ್ಟ ವಿಷಯಗಳ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದ ಅವರು, ಡಿವೈಎಸ್ಪಿ ಗಣಪತಿ ಮಾತ್ರವಲ್ಲ, ಯಾವುದೇ ಪ್ರಕರಣದ ಕುರಿತಂತೆ ನಿಷ್ಪಕ್ಷಪಾತ ತನಿಖೆಯನ್ನು ಸರಕಾರ ಮಾಡುತ್ತದೆ. ಕಾನೂನು ಪ್ರಕಾರ ಮಾಡಬೇಕಾದ ಎಲ್ಲವನ್ನೂ ಸರಕಾರ ಮಾಡುತ್ತಿದ ಎಂದು ಸಚಿವ ಖಾದರ್ ಹೇಳಿದರು.