ಪ್ರಿಯಾಂಕಾ ಗಾಂಧಿಗೆ ಡೆಂಗ್

Update: 2017-08-25 16:06 GMT

    ಹೊಸದಿಲ್ಲಿ, ಆ.25: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾಧ್ರಾ ಅವರು ಡೆಂಗ್ ಜ್ಚರದಿಂದಾಗಿ ದಿಲ್ಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
   ಪ್ರಿಯಾಂಕಾ ಗಾಂಧಿ ಆ.23ರಂದು ಜ್ವರದ ಕಾರಣದಿಂದಾಗಿ ಗಂಗಾರಾಮ್(ಎಸ್‌ಆರ್‌ಜಿಎಚ್) ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಪಡೆಯುತ್ತಿರುವ ಪ್ರಿಯಾಂಕ ಗಾಂಧಿಗೆ ಡೆಂಗ್ ಬಾಧಿಸಿರುವುದು ದೃಢಪಟ್ಟಿದೆ.
ಪ್ರಿಯಾಂಕಾ ಗಾಂಧಿ ಡೆಂಗ್‌ನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಅರೂಪ್ ಬಸು ತಿಳಿಸಿದ್ದಾರೆ.
   ದಿಲ್ಲಿಯಲ್ಲಿ ಈ ತನಕ 657 ಡೆಂಗ್ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ದಿಲ್ಲಿಯ 325 ಮಂದಿಗೆ ಡೆಂಗ್ ಜ್ವರ ಕಾಣಿಸಿಕೊಂಡಿತ್ತು. ಹೊರರಾಜ್ಯಗಳ 332 ಮಂದಿ ಗೆ ಡೆಂಗ್ ಬಾಧಿಸಿದೆ. ಇವರೆಲ್ಲ ದಿಲ್ಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ದಿಲ್ಲಿಯ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 64 ಡೆಂಗ್ ಪ್ರಕರಣಗಳು ದಾಖಲಾಗಿದೆ. ಎನ್‌ಡಿಎಂಸಿ ವ್ಯಾಪ್ತಿಯಲ್ಲಿ 42 ಡೆಂಗ್ ಪ್ರಕರಣಗಳು ಕಂಡು ಬಂದಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News