ಗುರ್ಮೀತ್ ಸಿಂಗ್ ನ ಬ್ಯಾಗ್ ಹಿಡಿದುಕೊಂಡಿದ್ದ ಹರಿಯಾಣದ ಡೆಪ್ಯುಟಿ ಎಜಿ ವಜಾ
Update: 2017-08-26 17:40 IST
ಹೊಸದಿಲ್ಲಿ, ಆ.26: ಅತ್ಯಾಚಾರಿ ಗುರ್ಮೀತ್ ಸಿಂಗ್ ನ ಬ್ಯಾಗ್ ಹಿಡಿದುಕೊಂಡಿದ್ದ ಹರಿಯಾಣದ ಡೆಪ್ಯುಟಿ ಅಡ್ವೊಕೇಟ್ ಜನರಲ್ ಗುರುದಾಸ್ ಸಿಂಗ್ ಸಲ್ವಾರ್ ಅವರನ್ನು ಹರಿಯಾಣ ಸರಕಾರ ಕರ್ತವ್ಯದಿಂದ ವಜಾ ಮಾಡಿದೆ.
ಗುರ್ಮೀತ್ ಸಿಂಗ್ ಅಪರಾಧಿ ಎಂದು ಪಂಚಕುಲಾದ ಸಿಬಿಐ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದಾಗ ಆತನ ಬ್ಯಾಗ್ ನ್ನು ಹರಿಯಾಣದ ಡೆಪ್ಯುಟಿ ಅಡ್ವೊಕೇಟ್ ಜನರಲ್ ಗುರುದಾಸ್ ಸಿಂಗ್ ಸಲ್ವಾರ್ ಅವರು ಹಿಡಿದುಕೊಂಡು ಹೋಗಿ ಸಹಾಯ ಮಾಡಿದ್ದರು. ಈ ಕಾರಣದಿಂದಾಗಿ ಅವರನ್ನು ಹರಿಯಾಣ ಸರಕಾರ ಕರ್ತವ್ಯದಿಂದ ವಜಾಗೊಳಿಸಿದೆ .