ಶಿರ್ವ: ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಬಸ್
Update: 2017-08-26 18:22 IST
ಶಿರ್ವ, ಆ. 26: ಚಾಲಕನ ನಿಯಂತ್ರಣ ತಪ್ಪಿ ಬಸ್ಸುವೊಂದು ಬಸ್ ತಂಗುದಾಣದ ಅಂಗಡಿಗೆ ನುಗ್ಗಿದ್ದ ಘಟನೆ ಇಂದು ಶಿರ್ವದಲ್ಲಿ ನಡೆದಿದೆ.
ಬೆಳ್ಮಣ್ ನಿಂದ ಉಡುಪಿಗೆ ತೆರಳುವ ಖಾಸಗಿ ಬಸ್ ಶಿರ್ವ ನಿಲ್ದಾಣಕ್ಕೆ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣದಲ್ಲಿರುವ ಅಂಗಡಿಗೆ ನುಗ್ಗಿದೆ.
ಈ ಸಂದರ್ಭ ಬಸ್ ನಿಲ್ದಾಣದ ಬಳಿ ಪ್ರಯಾಣಿಕರು ಇಲ್ಲದ ಕಾರಣ ಬಹುದೊಡ್ಡ ಅನಾಹುತವೊಂದು ತಪ್ಪಿದೆ. ಅವಘಡ ನಡೆಯುವ ಸಂದರ್ಭ ಅಂಗಡಿಯ ಮಾಲಕ ಕೇಶವ ಪೈ ಅಂಗಡಿಯ ಒಳಗಿದ್ದು, ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.