ಸೆ. 1ರಂದು ಸರಕಾರ ರಜೆ ಘೋಷಿಸಲು ಮನವಿ
Update: 2017-08-26 22:08 IST
ಮಂಗಳೂರು, ಆ. 26: ಬಕ್ರೀದ್ ಹಬ್ಬದ ಸರಕಾರಿ ರಜೆಯನ್ನು ಸೆ.2ರ ಬದಲು ಸೆ.1ಕ್ಕೆ ನೀಡಲು ಒತ್ತಾಯಿಸಿ ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆ ಗಳ ಒಕ್ಕೂಟದ ವತಿಯಿಂದ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾರಿಗೆ ಮನವಿ ಸಲ್ಲಿಸಲಾಯಿತು.
ಬಕ್ರೀದ್ ಆಚರಣೆಯು ಕರಾವಳಿ ಜಿಲ್ಲೆಗಳಾದ ದ.ಕ. ಉಡುಪಿ, ಕರಾವಾರಗಳಲ್ಲಿ ಚಂದ್ರದರ್ಶನದ ಆಧಾರದಲ್ಲಿ ಸೆ.1ರಂದು ಆಚರಣೆ ಮಾಡಲು ಈಗಾಗಲೇ ತೀರ್ಮಾನಿಸಲಾಗಿದೆ. ಆದ್ದರಿಂದ ಸೆ.2ರಂದು ಘೋಷಣೆಯಾಗಿರುವ ಸರಕಾರಿ ರಜೆಯನ್ನು ರಾಜ್ಯ ಸರಕಾರವು ಸೆ.1ಕ್ಕೆ ಘೋಷಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್, ಒಕ್ಕೂಟದ ಸಿ.ಎಮ್. ಮುಸ್ತಫಾ, ಮೊಯ್ದಿನ್ ಮೋನು, ಹಮೀದ್ ಕುದ್ರೋಳಿ ಮುಂತಾದವರು ಉಪಸ್ಥಿತರಿದ್ದರು.