×
Ad

ಪ್ರವಾದಿ (ಸ) ಸುನ್ನತ್ತಿನ ಮಹತ್ವವನ್ನು ಜಾಗೃತಿಗೊಳಿಸಲು ‘ಅಹ್‌ಮಿಯತು ಸುನ್ನಃ’ ಸಂಘಟನೆ ಅಸ್ತಿತ್ವಕ್ಕೆ

Update: 2017-08-26 22:20 IST

ಮಂಗಳೂರು, ಆ. 26: ಪ್ರವಾದಿ ಮುಹಮ್ಮದ್ (ಸ.ಅ.) ರವರ ಸುನ್ನತ್ತನ್ನು ಸಮುದಾಯದಲ್ಲಿ ಜಾಗೃತಗೊಳಿಸುವ ಸಲುವಾಗಿ ಅಹ್‌ಮಿಯತು ಸುನ್ನಃ’ ಎಂಬ ಸಂಘಟನೆಯನ್ನು ಸ್ಥಾಪಿಸಲಾಗಿದೆ.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಮುಖ್ಯ ಸಲಹೆಗಾರರಾಗಿ ಮೌಲಾನಾ ಅಶ್ಫಾಖ್ ಫೈಝಿ, ಖತೀಬರು, ಕೇಂದ್ರ ಜುಮಾ ಮಸೀದಿ ಸಜಿಪನಡು, ಮೌಲಾನಾ ಇಸ್ಹಾಖ್ ಸಖಾಫಿ, ಖತೀಬರು, ಫಾರೂಖ್ ಜುಮಾ ಮಸೀದಿ ಮರಕಡ ಮತ್ತು ಮೌಲಾನಾ ರಿಯಾಝುಲ್ ಹಖ್, ಖತೀಬರು, ಶಾಹ್ ಮೀರ್ ಮಸೀದಿ, ಕಾರ್‌ಸ್ಟ್ರೀಟ್ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಇಬ್ರಾಹಿಂ ಪೊಡಿಮೋನು ತಲಪಾಡಿ, ಅಧ್ಯಕ್ಷರಾಗಿ ಶರೀಫ್ ಕೋಡಿಜಾಲ್, ಉಪಾಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಉಚ್ಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಅಡ್ವಕೇಟ್ ಶೇಖ್ ಇಸ್ಹಾಖ್ ಕಡಬ, ಕೋಶಾಧಿಕಾರಿಯಾಗಿ ಸಿದ್ದೀಖ್ ಕುಳಾಯಿ, ಜೊತೆ ಕಾರ್ಯದರ್ಶಿಯಾಗಿ ಖಮರುಲ್ ಇಸ್ಲಾಂ ಪಾಣೆಮಂಗಳೂರು, ಮಾಧ್ಯಮ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀರ್ ಕೆ.ಎಸ್.ಎಂ ಕಣ್ಣೂರು ಆಯ್ಕೆಯಾಗಿದ್ದಾರೆ. ಅಲ್ಲದೆ 13 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ.

ಸ್ವಚ್ಚತೆ, ಪರಿಸರ ಸಂರಕ್ಷಣೆ (ಮರ ನೆಡುವುದು, ಜಲ ಸಂರಕ್ಷಣೆ) ಆರೋಗ್ಯ ಮತ್ತು ಮಿತ ಆಹಾರ ಸೇವನೆ, ದೇಶ ಪ್ರೇಮ ಮತ್ತು ಸೌಹಾರ್ದತೆ ಮೊದಲಾದ ವಿಷಯಗಳಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಜೀವನ ಸಂದೇಶವನ್ನು ಕಾರ್ಯರೂಪದಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ ಜನಜಾಗೃತಿಯನ್ನು ಮೂಡಿಸುವುದು ಈ ಸಂಘಟನೆಯ ಮೂಲ ಉದ್ದೇಶವಾಗಿದೆ. ಆ ಮೂಲಕ ಒಂದು ಸ್ವಚ್ಚ ಹಸಿರು ಪರಿಸರದ ಮತ್ತು ಆರೋಗ್ಯಯುಕ್ತ ಸೌಹಾರ್ದ ಸಮಾಜ ನಿರ್ಮಾಣದ ಗುರಿಯನ್ನು ಹೊಂದಿದೆ. ಈ ಬಗ್ಗೆ ಸಮಾಜದ ಸರ್ವರಿಗೂ ಅರಿವನ್ನು ಮೂಡಿಸುವ ಪ್ರಯತ್ನವನ್ನು ಎಲ್ಲಾ ಮೊಹಲ್ಲಾಗಳಲ್ಲಿ ನಡೆಸಲಾಗುವುದು ಎಂದು ಸಂಘಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News