ಕಡಬ : ಇಸ್ಪೀಟ್ ಅಡ್ಡೆಗೆ ದಾಳಿ - 10 ಮಂದಿಯ ಬಂಧನ
ಕಡಬ, ಆ.27. ಠಾಣಾ ವ್ಯಾಪ್ತಿಯ 102 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ಎಂಬಲ್ಲಿ ಗೇರಬೀಜ ತೋಟವೊಂದರಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ.
ಇಸ್ಪೀಟು ಆಟದಲ್ಲಿ ನಿರತರಾಗಿದ್ದ ವೇಳೆ ಖಚಿತ ಮಾಹಿತಿಯನ್ವಯ ದಾಳಿ ನಡೆಸಿರುವ ಕಡಬ ಪೊಲೀಸರು ದಾಳಿ ನಡೆಸಿ ಆರೋಪಿಗಳಾದ ರೆಂಜಿಲಾಡಿಯ ಜಗದೀಶ್, ಬಾಬು ಕುದ್ಮಾರು, ಅಶ್ರಫ್ ಕಳಾರ, ಹಮೀದ್ ಕಳಾರ, ಸುಂದರ ಆಲಂಕಾರು, ರಾಮ ಮರ್ಕಂಜ ಸುಳ್ಯ, ಕೊರಗು ಗೋಳಿಯಡ್ಕ, ಆನಂದ ಯೇನೆಕಲ್ಲು ಸುಳ್ಯ, ಹಮೀದ್ ಕುಟ್ರುಪ್ಪಾಡಿ, ವಸಂತ ಐತ್ತೂರು ರವರನ್ನು ಬಂಧಿಸಿದ್ದು, ಖಾಸಿಂ ಮತ್ತು ಅಂತೋಣಿ ಪರಾರಿಯಾಗಿದ್ದಾರೆನ್ನಲಾಗಿದೆ. ಆಟಕ್ಕೆ ಬಳಸಿದ್ದ 5425 ರೂಪಾಯಿ ಹಾಗೂ ಟರ್ಪಾಲು ಮತ್ತು ಇಸ್ಪೀಟು ಕಾರ್ಡುಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಕಡಬ ಠಾಣಾ ಉಪನಿರೀಕ್ಷಕರಾದ ಪ್ರಕಾಶ್ ದೇವಾಡಿಗ, ಎಎಸ್ಐ ಚಂದ್ರಶೇಖರ್, ಹೆಡ್ ಕಾನ್ಸ್‌ಟೇಬಲ್ ಗಳಾದ ಸತೀಶ್, ಶಿವಪ್ರಸಾದ್, ಪೊಲೀಸ್ ಕಾನ್ಸ್‌ಟೇಬಲ್ ಗಳಾದ ಪ್ರಕಾಶ್ ಪೂಜಾರಿ, ಶಿವರಾಜ್, ಜೀಪು ಚಾಲಕ ಕನಕರಾಜ್ ಹಾಗೂ ಹೋಂ ಗಾರ್ಡ್ಸ್ ಗಳಾದ ಯೋಗೀಶ್, ಲಿಂಗಪ್ಪ ಭಾಗವಹಿಸಿದ್ದರು.