ಮೂಡುಬಿದಿರೆ : ಆರಾಧನಾ ಭಟ್ ಗೆ ಸನ್ಮಾನ
Update: 2017-08-27 17:48 IST
ಮೂಡುಬಿದಿರೆ,ಆ.27: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶುಂಠಿಲಪದವು ನಿಡ್ಡೋಡಿ ಇದರ 12 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಬಹುಮುಖ ಪ್ರತಿಭೆ,ಮಜಾಭಾರತ ಖ್ಯಾತಿಯ ಆರಾಧನಾ ಭಟ್ ಅವರನ್ನು ಸಮ್ಮಾನಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ದೇವಸ್ಯ, ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್, ಕಾರ್ಯಾಧ್ಯಕ್ಷ ಲೋಕನಾಥ ಸಾಲ್ಯಾನ್,ಕಾರ್ಯದರ್ಶಿ ಸುಧಾಕರ ಮೇಲ್ದಬೆಟ್ಟು, ಕೋಶಾಧಿಕಾರಿ ಯಶವಂತ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಸುಂದರ ಪೂಜಾರಿ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಸಮಿತಿಯ ಸದಸ್ಯರಾದ ಪ್ರದೀಫ್ ಶೆಟ್ಟಿ, ಸುಕುಮರ್ ಅಮೀನ್ ಉಪಸ್ಥಿತರಿದ್ದರು.