​ಬೊಬ್ಬೆ ಹಾಕುವುದರಿಂದ ಹಿಂದೂ ಧರ್ಮ ಉದ್ದಾರವಾಗಲ್ಲ: ಕೇಮಾರು ಶ್ರೀ

Update: 2017-08-27 13:32 GMT

ಕುಂದಾಪುರ, ಆ.27: "ಕೇವಲ ಬೊಬ್ಬೆ ಹಾಕುವುದರಿಂದ ಹಿಂದೂ ಧರ್ಮ ಉದ್ದಾರವಾಗುವುದಿಲ್ಲ. ಗರ್ವದಿಂದ ಘರ್ಜಿಸು ಎನ್ನುವವನಿಗೆ ಭಗವದ್ಗೀತೆಯ ಕುರಿತು ಒಂದಷ್ಟು ಜ್ಞಾನವಿರುವುದಿಲ್ಲ. ಗಣೇಶೋತ್ಸವ ಆಚರಣೆಯ ನೆಪದಲ್ಲಿ ಅನ್ಯಾಯ, ಹಿಂಸೆ ಮಾಡಬಾರದು. ಕುಡಿದು ಕುಣಿಯುವುದನ್ನು ನಿಲ್ಲಿಸಿ, ಹಿಂದೂ ಸಂಸ್ಕೃತಿಯ ಚೌಕಟ್ಟಿನಲ್ಲಿ ಆಚರಣೆ ಮಾಡಬೇಕು" ಎಂದು ಕೇಮಾರು ಮಠಾಧೀಶ ಶ್ರೀಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಹೆಮ್ಮಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗ ವಹಿಸಿ ಅವರು ಆಶೀರ್ವಚನ ನೀಡಿದರು.

ಇಂದು ದೇಶದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ದೊಡ್ಡ ದುರಂತ. ಇತ್ತೀಚಿನ ದಿನಗಳಲ್ಲಿ ಮಾತೃಭಾಷೆಗಾಗಿ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಇಂತಹ ಹೋರಾಟಗಾರರು ಮೊದಲು ತಮ್ಮ ತಾಯಿಗೆ ಸೂಕ್ತವಾದ ನೆಲೆಯನ್ನು ಒದಗಿಸಬೇಕು. ತಾಯಿಗಿಂತ ಮಠ, ದೇವಸ್ಥಾನ ಮಂದಿರಗಳು ದೊಡ್ಡದಲ್ಲ ಎಂದರು.

ಪ್ರಾರ್ಥನಾ ಮಂದಿರ, ದೇವಸ್ಥಾನಗಳು ವ್ಯಾಪಾರಿ ಕೇಂದ್ರವಾಗಿ ಮಾರ್ಪಡಾಗುತ್ತಿವೆ. ಪಾಶ್ಚಿಮಾತ್ಯ ಸಂಸ್ಕೃತಿ ಭಾರತಕ್ಕೆ ಕಾಲಿಡುತ್ತಿದೆ. ಈಗಿನ ಮಕ್ಕಳಲ್ಲಿ ಆತ್ಮಶಕ್ತಿ ಕುಂದುತ್ತಿದೆ. ಇದರ ಪರಿಣಾಮ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News