ಭಟ್ಕಳ: ದೇಶಾದಾದ್ಯಂತ ದಲಿತ ಮುಸ್ಲಿಮರ ಮೇಲಿನ ಗುಂಪು ಹತ್ಯ ಖಂಡಿಸಿ ಎಸ್.ಡಿ.ಪಿ.ಐ ಯಿಂದ ಮಾನವ ಸರಪಳಿ
Update: 2017-08-27 20:05 IST
ಭಟ್ಕಳ,ಆ.27 : ಎಸ್.ಡಿ.ಪಿ.ಐ ಇಂದ ದೇಶದಾದ್ಯಂತ ಮುಸ್ಲಿಮರ, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ಖಂಡಿಸಿ ಆಗಸ್ಟ್ 25 ಶುಕ್ರವಾರದಂದು "ಮನೆಯಿಂದ ಹೊರಗೆ ಬನ್ನಿ" ಎಂಬ ಘೋಷಣೆಯೊಂದಿಗೆ ರಾಷ್ಟ್ರಾದ್ಯಂತ ಏಕ ಕಾಲಕ್ಕೆ ಹಮ್ಮಿಕೊಂಡಿರುವ ಮಾನವ ಸರಪಳಿ ಜಾಗೃತಿ ಅಭಿಯಾನವು ಭಟ್ಕಳದಲ್ಲಿ ಯಶಸ್ವಿಯಾಗಿ ನಡೆಯಿತು.
ಇಲ್ಲಿನ ಮದೀನಾ ಜಾಮಿಯಾ ಮಸೀದಿಯ ಎದುರು ಸೇರಿದ ಎಸ್.ಡಿ.ಪಿ.ಐ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸುವುದರ ಮೂಲಕ ದೇಶದ ದಲಿತ, ಮುಸ್ಲಿಮ್ ಹಾಗೂ ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಗುಂಪು ಹತ್ಯೆ, ಮಾನವ ಹತ್ಯೆಯನ್ನು ಖಂಡಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಸಾರ್ವಜನಿಕರು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.