ವಿಶ್ವೇಶರಯ್ಯ ತಾಂತ್ರಿಕ ವಿವಿ ವಿರುದ್ಧ ಎನ್‌ಎಸ್‌ಯುಐ ಧರಣಿ
ಉಡುಪಿ, ಆ.28: ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಎನ್‌ಎಸ್‌ಯುಐ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ನಲ್ಲಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಅಲ್ಮೇಡಾ ಮಾತನಾಡಿ, ವಿಟಿಯು ಅಧೀನದಲ್ಲಿ ಸುಮಾರು 200 ಇಂಜಿನಿಯರ್ ಕಾಲೇಜುಗಳು ಬರುತ್ತವೆ. ಇದರಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಂದು ಈ ವಿವಿಯ ಪರಿಸ್ಥಿತಿ ತೀರ ಹದಗೆಟ್ಟಿದೆ. ಈ ಮೂಲಕ ವಿವಿಯು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ. ಅಲ್ಲದೆ ಇಂಜಿನಿಯರಿಂಗ್ ಫಲಿತಾಂಶವನ್ನು ಪ್ರಕಟಿಸಲು ಸಾಕಷ್ಟು ವಿಳಂಬ ಮಾಡುತ್ತಿದೆ ಎಂದು ದೂರಿದರು.
ಧರಣಿಯಲ್ಲಿ ಎನ್‌ಎಸ್‌ಯುಐ ಮುಖಂಡರಾದ ಅರ್ತೂರು ಚಾರ್ಲೀಸ್, ನಿಖಿಲ್ ದೇವಾಡಿಗ, ದೇವದಾಸ್ ನಾಯಕ್, ಸಚಿನ್, ಮಾರ್ಶ್, ಶ್ರೀರಾಗ್, ಶೈಲೇಶ್, ಮುಹಮ್ಮದ್ ಸ್ವಾಹಿಲ್ ಮೊದಲಾದವರು ಉಪಸ್ಥಿತರಿದ್ದರು.