ಪುತ್ತೂರು : ವಸತಿ ನಿರ್ಮಾಣಕ್ಕೆ ಸಹಾಯಧನಕ್ಕೆ ಮನವಿ
ಪುತ್ತೂರು,ಆ.28: ಪಂಚವೃತ್ತಿಗಳಲ್ಲಿ ನಿರತರಾಗಿರುವ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ವಿಶ್ವಕರ್ಮ ಸಮುದಾಯದವರಿಗೆ ನಿವೇಶನ ಉಳ್ಳವರಿಗೆ ವಸತಿ ನಿರ್ಮಾಣಕ್ಕಾಗಿ ಸಹಾಯಧನ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡಲು ರಾಜೀವ್‍ಗಾಂಧಿ„ ಗ್ರಾಮೀಣ ವಸತಿ ನಿಗಮಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ರಾಜ್ಯ ವಿಶ್ವಕರ್ಮ ಮಹಾಮಂಡಲ ಇದರ ಪುತ್ತೂರು ಶಾಖಾಧ್ಯಕ್ಷ ಎಂ.ಎಸ್.ರಾವ್ ವಿಶ್ವಕರ್ಮ ಅವರ ನೇತೃತ್ವದಲ್ಲಿ ಮನವಿ ನೀಡಲಾಗಿದ್ದು, ಈ ಸಂದರ್ಭದಲ್ಲಿ ಮಹಾಮಂಡಲದ ಕೋಶಾಧಿಕಾರಿ ಎಂ.ಆನಂದ ಆಚಾರ್ಯ, ಕಾರ್ಯಾಧ್ಯಕ್ಷ ವಸಂತ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗಿರೀಶ್‍ವತ್ಸ್ ಆಚಾರ್ಯ, ನಿರ್ದೇಶಕರಾದ ಮೌನೇಶ್ವರಿ ಶಿವರಾಮ ಆಚಾರ್ಯ, ಜಯಶ್ರೀ ದಿನೇಶ್ ಆಚಾರ್ಯ, ವಿಜಯ ಕುಮಾರ್ ಆಚಾರ್ಯ ವಿಟ್ಲ, ಸದಸ್ಯರಾದ ಪುರುಷೋತ್ತಮ ಆಚಾರ್ಯ, ಪುಂಡರೀಕ ಆಚಾರ್ಯ, ಶಿವರಾಮ ಆಚಾರ್ಯ, ವೈ.ಎಸ್.ಸಂತೋಷ್ ಆಚಾರ್ಯ, ವೇದಾವತಿ ಜಗದೀಶ್ ಆಚಾರ್ಯ, ಲಲಿತಾ ಜೀವನ ಆಚಾರ್ಯ, ಸ್ವರ್ಣಲತಾ ವೆಂಕಟೇಶ ಆಚಾರ್ಯ, ಗುಣವತಿ ಕಮಲಾಕ್ಷ ಆಚಾರ್ಯ, ರೋಹಿಣಿ ರಾಘವ ಆಚಾರ್ಯ, ವಾಸುದೇವ ಆಚಾರ್ಯ ವಿಟ್ಲ, ರಾಘವ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.