×
Ad

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2017-08-28 22:08 IST

ಉಡುಪಿ, ಆ.28: ಅನಾರೋಗ್ಯದಿಂದ ಮೃತಪಟ್ಟ ಮಗಳ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಉಡುಪಿ ಗುಂಡಿಬೈಲು ದುಗ್ಗಣ್ಣ ಬೆಟ್ಟು ರಸ್ತೆಯ ನಿವಾಸಿ ಸುಮಿತ್ರಾ ಆಚಾರ್ತಿ(69) ಎಂಬವರು ಆ.27ರಂದು ರಾತ್ರಿ ವೇಳೆ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲೂರು: ಕೊಲ್ಲೂರು ಶ್ರೀಚೌಡೇಶ್ವರಿ ದೇವಸ್ಥಾನದ ಬಳಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನ ಕಬ್ಬಿಣದ ಕಂಬದ ಅಡ್ಡಪಟ್ಟಿಗೆ ಆ.27ರಂದು ರಾತ್ರಿ ವೇಳೆ ಕೇರಳ ಮೂಲದ ರವೀಂದ್ರನ್(60) ಎಂಬವರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News