×
Ad

ಭೂಸೇನೆಯ ಮೇಜರ್ ಆಗಿ ಭಡ್ತಿ ಹೊಂದಿದ ಗ್ರಾಮೀಣ ಪ್ರತಿಭೆ

Update: 2017-08-29 17:14 IST

ಕಡಬ, ಆ. 29. ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿದ್ದ ಪುತ್ತೂರು ತಾಲೂಕಿನ ಉದನೆ ನಿವಾಸಿ ವಿನೋಜ್ ಪಿ.ಜೆ. (40) ಅವರು ಮಂಗಳವಾರ ಮೇಜರ್ ಆಗಿ ಭಡ್ತಿ ಹೊಂದಿದ್ದಾರೆ.

ಗ್ರಾಮೀಣ ಪ್ರತಿಭೆಯಾಗಿದ್ದು, ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ವಿನೋಜ್‌ ಅವರು ನೆಲ್ಯಾಡಿಯ ಸೈಂಟ್ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ 7ನೆ ತರಗತಿಯಲ್ಲಿರುವಾಗ ಭೂಸೇನಾ ಕ್ರೀಡಾಪಟುವಾಗಿ ಆಯ್ಕೆಗೊಂಡು ತನ್ನ ಕಠಿಣ ಪರಿಶ್ರಮದ ಮೂಲಕ ಕ್ಯಾಪ್ಟನ್ ಹುದ್ದೆಗೇರಿದ್ದರು. ಇದೀಗ ಭಡ್ತಿಗೊಂಡು ಮೇಜರ್ ಹುದ್ದೆಯನ್ನು ಅಲಂಕರಿಸಿದ್ದು, ಪ್ರಸ್ತುತ ಪುಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಉದನೆ ಪುತ್ತನ್‌ಪರಂಬಿಲ್ ನಿವಾಸಿ ಜೋಸೆಫ್ ಪಿ.ಸಿ. ಮತ್ತು ಮೇರಿ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News