×
Ad

ಶ್ರೀಲಂಕಾ ವಿರುದ್ಧದ ಗೆಲುವಿನ ನಂತರ ಕೊಹ್ಲಿ ಜೊತೆ ಡ್ಯಾನ್ಸ್ ಮಾಡಿದ ಮಗು ಯಾರು ಗೊತ್ತೇ?

Update: 2017-08-29 18:58 IST

ಹೊಸದಿಲ್ಲಿ, ಆ.29: ಶ್ರೀಲಂಕಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 3ರಲ್ಲಿ ಜಯ ಗಳಿಸಿದ ನಂತರ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿಯವರು ಮಗುವೊಂದರ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.  

ಗಾಯಕ ಲೋ ಬೇಗಾ ಹಾಡಿರುವ ‘ಐ ಗಾಟ್ ಎ ಗರ್ಲ್’ ಹಾಡಿಗೆ ಕೊಹ್ಲಿ ಜೊತೆ ನೃತ್ಯ ಮಾಡಿದ್ದು ಬೇರಾರೂ ಅಲ್ಲ, ಟೀಂ ಇಂಡಿಯಾದ ವೇಗದ ಬೌಲರ್ ಮುಹಮ್ಮದ್ ಶಮಿಯವರ 2 ವರ್ಷದ ಪುತ್ರಿ ಆಯ್ರಾಹ್.

ಕೊಹ್ಲಿ-ಆಯ್ರಾಹ್ ರ ಈ ನೃತ್ಯದ ವಿಡಿಯೋವನ್ನು ಸ್ವತಃ ಶಮಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀಲಂಕಾ ವಿರುದ್ಧದ 3ನೆ ಏಕದಿನ ಪಂದ್ಯದಲ್ಲೂ ಭಾರತವು ಜಯಿಸಿತ್ತು. ಸರಣಿ ಜಯಿಸಿದ ಸಂತೋಷದಲ್ಲಿ ಕೊಹ್ಲಿ ಮಾಡಿರುವ ಡ್ಯಾನ್ಸ್ ಇದಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News