ಉಡುಪಿ: ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಲಾರಿ
Update: 2017-08-29 19:18 IST
ಉಡುಪಿ, ಆ. 29: ನಿಯಂತ್ರಣ ತಪ್ಪಿದ ಲಾರಿಯೊಂದು ಕೆರೆಗೆ ಉರುಳಿ ಬಿದ್ದ ಘಟನೆ ಇಂದು ಬೆಳಗ್ಗೆ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಎಂಬಲ್ಲಿ ನಡೆದಿದೆ.
ಕಲ್ಲು ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಸುಮಾರು 800 ವರ್ಷಗಳಷ್ಟು ಪುರಾತನವಾಸ ದೇಗುಲದ ಕೆರೆಗೆ ಬಿದ್ದಿದ್ದು, ಇದರಿಂದ ಕೆರೆಯ ಆವರಣ ಗೋಡೆ ಹಾಗು ರಸ್ತೆ ಕುಸಿದಿದೆ. ಘಟನೆಯಿಂದ ಲಾರಿ ಚಾಲಕ ನಾಗರಾಜ್ ಮತ್ತು ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.