ಅಪಘಾತಕ್ಕೆ ಕಾರಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಅಪಾಯಕಾರಿ ಹೊಂಡಗಳು

Update: 2017-08-29 13:59 GMT

ಮಾಣಿ, ಆ. 29: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಣಿಯಿಂದ ಕಲ್ಲಡ್ಕ ತನಕ ಹಳೀರ ಸೂರಿಕುಮೇರು ಕುದ್ರೆಬೆಟ್ಟು ಎಂಬಲ್ಲಿ ಅಪಾಯಕಾರಿ ಹೊಂಡಗಳು ತಲೆ ಎತ್ತಿದ್ದು ಇವು ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿವೆ.

ಮಳೆಗಾಲದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರೆಲ್ಲಾ ರಸ್ತೆಗಳಲ್ಲೇ ಹೋಗುತ್ತಿರುವುದರಿಂದ ವಾಹನ ಚಾಲಕರಿಗೆ ರಸ್ತೆಯು ಸರಿಯಾಗಿ ಗೋಚರಿಸದೆ ಇಂತಹಾ ಹೊಂಡಗಳಿಗೆ ಬಿದ್ದು ಹಾಗೂ ಕೆಲವೊಂದು ಹೊಂಡಗಳು ಹತ್ತಿರ ತಲುಪಿದ ನಂತರ ಗೋಚರಿಸುವುದರಿಂದಲೂ ಕೂಡಲೇ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುವ ವಾಹನಗಳು ಢಿಕ್ಕಿಯಾಗಿ ಹಲವಾರು ಅಪಘಾತಗಳು ಸಂಭವಿಸಿವೆ.

ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿಗಾಗಿ ಅಲ್ಲಲ್ಲಿ ಮರಗಳನ್ನು ಕಡಿದು ಹಾಕಿರುವುದು ಅವು ರಸ್ತೆಯಿಂದ ಸಂಪೂರ್ಣ ತೆರವಾಗಿರುವುದಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಮರದ ಕೊಂಬೆಗಳನ್ನು ಹಾಕಿರುವುದರಿಂದ ಶಾಲಾ ಮಕ್ಕಳಿಗೆ ಹಾಗೂ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದ್ದು, ಪ್ರಾಣ ಕೈಯಲ್ಲಿ ಹಿಡಿದು ರಸ್ತೆಗಳಲ್ಲೇ ನಡೆದಾಡಬೇಕಾದ ಪರಿಸ್ಥಿತಿ ಇದೆ. ಹೇಗೂ ಹೆದ್ದಾರಿಯು ಚತುಷ್ಪಥಗೊಳ್ಳುವುದು ಎಂದು ಜನರು ಈ ಸಂಕಷ್ಟಗಳನ್ನು ನುಂಗಿಕೊಳ್ಳುತ್ತಿದ್ದಾರೆ. ಆದರೆ ಹೆದ್ದಾರಿಯ ಕಾಮಗಾರಿಯು ಪೂರ್ಣಗೊಳ್ಳಲು ಹಲವು ವರ್ಷಗಳು ಬೇಕಾಗುವುದರಿಂದ ಇದೇ ಸ್ಥಿತಿಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವುದು ಸಾಹಸವೇ ಸರಿ, ಆದ್ದುದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಬೇಕಾಗಿದೆ.

Writer - ಸಲೀಂ ಮಾಣಿ

contributor

Editor - ಸಲೀಂ ಮಾಣಿ

contributor

Similar News