ರಾಜ್ಯಮಟ್ಟದ ಕರಾಟೆ- ರೆಡ್ ಕ್ಯಾಮಲ್ಸ್‌ಗೆ ಚಾಂಪಿಯನ್
Update: 2017-08-29 20:55 IST
ಮೂಡುಬಿದಿರೆ, ಆ. 29: ಶೋರಿನ್ ರಿಯೂ ಕರಾಟೆ ಎಸೋಸಿಯೇಶನ್, ಮಹಾವೀರ ಕಾಲೇಜು ಹಾಗೂ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಗಂಜಿಮಠದ ವಂಡೇಲ ಅಡಿಟೋರಿಯಂನಲ್ಲಿ ನಡೆದ 15ನೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಂಗಳೂರಿನ ರೆಡ್ ಕ್ಯಾಮಲ್ಸ್ ಸ್ಕೂಲ್ ಚಾಂಪಿಯನ್ ಶಿಪ್ ಪಡೆದಿದೆ.
ರನ್ನರ್ಸ್ ಅಪ್ ಪ್ರಶಸ್ತಿಯನ್ನು ಅಡ್ಯಾರ್ ಬರಕಾ ಇಂಟರ್‌ನೇಷನಲ್ ಸ್ಕೂಲ್ ಹಾಗೂ ತೃತೀಯ ಸ್ಥಾನವನ್ನು ಕಲ್ಲಾಪು ಪೀಸ್ ಪಬ್ಲಿಕ್ ಸ್ಕೂಲ್ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ, ಉದ್ಯಮಿಗಳಾದ ಅಬುಲಾಲ, ಸಿ.ಎಚ್. ಗಫೂರ್, ಮಹಾವೀರ ಕಾಲೇಜಿನ ದೈಹಿಕ ಶಿಕ್ಷಕ ರಾಮಪ್ರಸಾದ್ ಶೊರೀನ್ ರಿಯೂ ಕರಾಟೆಯ ಮುಖ್ಯ ಶಿಕ್ಷಕ ನದೀಮ್, ಜೊತೆ ಕಾರ್ಯದರ್ಶಿ ರಾಜೇಶ್, ತೀರ್ಪುಗಾರರಾದ ಸರ್ಫರಾಜ್, ರಹಿಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು.