ದೋಣಿ ಅವಘಡ: 9 ಮಂದಿ ಪಾರು
Update: 2017-08-29 21:48 IST
ಮಂಗಳೂರು, ಆ.29: ಮೀನುಗಾರಿಕೆ ತೆರಳಿದ್ದ ಟ್ರಾಲ್‌ಬೋಟೊಂದು ಅಳಿವೆ ಬಾಗಿಲು ಸಮೀಪ ಮರಳು ದಿಣ್ಣೆಗೆ ಢಿಕ್ಕಿ ಹೊಡೆದಿದೆ. ಅವಘಡದಿಂದ ಬೋಟ್‌ನಲ್ಲಿದ್ದ 9 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ 2:30ರ ವೇಳೆಗೆ ಈ ಘಟನೆ ಸಂಭವಿಸಿದೆ. ಸೀ ಮಾಸ್ಟರ್ ಎಂಬ ಹೆಸರಿನ ಬೋಟ್ ಅವಘಡಕ್ಕೀಡಾಗಿದ್ದು, ತೋಟ ಬೆಂಗರೆ ಸಮೀಪ ದಡ ಸೇರಿದೆ. ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.