ರೈಲಿನಡಿಗೆ ಬಿದ್ದ ಗಾಯಾಳು ಮೃತ್ಯು
Update: 2017-08-29 22:02 IST
ಬೈಂದೂರು, ಆ.29: ಶಿರೂರು ರೈಲ್ವೆ ನಿಲ್ದಾಣದಲ್ಲಿ ರೈಲಿನಡಿಗೆ ಕಾಲುಗಳು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕುಮಟಾ ತಾಲೂಕಿನ ಬಂಕಿಕೊಡ ಹನೇಹಳ್ಳಿಯ ಉಮೇಶ ಮಹಾದೇವ ವರ್ಣೇಕರ್(42) ಎಂದು ಗುರುತಿಸಲಾಗಿದೆ. ಇವರು ಆ.24 ರಂದು ತನ್ನ ಪತ್ನಿ ಮಕ್ಕಳೊಂದಿಗೆ ಶಿರೂರು ರೈಲ್ವೆ ನಿಲ್ದಾಣದಲ್ಲಿ ರೈಲು ನಿಧಾನ ವಾಗಿ ಚಲಿಸುತ್ತಿರುವಾಗ ಇಳಿಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ರೈಲು ಹಳಿಯ ಮೇಲೆ ಬಿದ್ದರು.
ಇದರ ಪರಿಣಾಮ ರೈಲು ಇವರ ಎರಡು ಕಾಲುಗಳ ಮೇಲೆ ರೈಲು ಚಲಿಸಿತ್ತು. ಇದರಿಂದ ಎರಡು ಕಾಲುಗಳು ತುಂಡಾಗಿ ಗಂಭೀರವಾಗಿ ಗಾಯ ಗೊಂಡಿದ್ದ ಉಮೇಶ್ ಮಹಾದೇವ ಆ.27ರಂದು ಸಂಜೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.