×
Ad

ಸೆ.1ರಂದು ತುಳುಚಿತ್ರ ‘ಪತ್ತನಾಜೆ’ ಬಿಡುಗಡೆ

Update: 2017-08-29 22:18 IST

ಉಡುಪಿ, ಆ.29: ಮುಂಬೈ ಯಲ್ಲಿ ತುಳು ರಂಗಭೂಮಿಯನ್ನು ಕಟ್ಟಿ ಬೆಳೆಸಿದ, ಮುಂಬೈಯ ಕಲಾಜಗತ್ತು ಹಾಗೂ ಚಿಣ್ಣರಬಿಂಬಗಳ ರೂವಾರಿ, ರಂಗಭೂಮಿಯಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿರುವ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರು ಕಲಾಜಗತ್ತು ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಿ ನಿರ್ದೇಶಿಸಿರುವ ‘ಪತ್ತನಾಜೆ’ ತುಳು ಚಿತ್ರ ಸೆ.1ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ.

 ಮಂಗಳವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ತಿಳಿಸಿದ ಚಿತ್ರದ ನಿರ್ಮಾಪಕ-ನಿರ್ದೇಶಕ ತೋನ್ಸೆ ವಿಜಯಕುಮಾರ್ ಶೆಟ್ಟಿ, ಜಿಲ್ಲೆಯ ಎಂಟು ಚಿತ್ರ ಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದರು. ತಿಂಗಳ ಕೊನೆಯೊಳಗೆ ಮುಂಬಿಯಯಲ್ಲೂ ಚಿತ್ರ ಪ್ರದರ್ಶನಗೊಳ್ಳಲಿದ್ದು, ಮುಂದೆ ವಿದೇಶಗಳಲ್ಲೂ ಅದನ್ನು ಬಿಡುಗಡೆಗೊಳಿಸುವ ಯೋಜನೆ ಇದೆ ಎಂದರು.

ಪತ್ತನಾಜೆ ಎಂದರೆ ತುಳುವರ ವಿಶೇಷ ಹಬ್ಬ. ತುಳುವರ ಭೇಷ (ಬೇಸಿಗೆ) ತಿಂಗಳ ಹತ್ತನೇ ದಿನಕ್ಕೆ ಪತ್ತನಾಜೆ ಎನ್ನುತ್ತಾರೆ. ಅಂದು ಗದ್ದೆಗೆ ಬೀಜ ಬಿತ್ತುವುದು, ಶುಭ ಕಾರ್ಯಗಳಿಗೆ ನಾಂದಿ ಹಾಡಲಾಗುತ್ತದೆ. ಅಂದು ಮಳೆ ಸುರಿಯುವ ನಂಬಿಕೆ ತುಳುವರಿಗಿದ್ದು, ಅದು ಶುಭ ಸಂಕೇತವೆಂದು ಭಾವಿಸಲಾಗುತ್ತದೆ. ಪತ್ತನಾಜೆಯಂದು ಹುಟ್ಟುವ ನಾಯಕಿಯ ಸು್ತ ಈ ಚಿತ್ರ ನಡೆಯುತ್ತದೆ ಎಂದರು.

ಪತ್ತನಾಜೆ ಎಂದರೆ ತುಳುವರ ವಿಶೇಷ ಹಬ್ಬ. ತುಳುವರ ೇಷ(ಬೇಸಿಗೆ)ತಿಂಗಳಹತ್ತನೇದಿನಕ್ಕೆಪತ್ತನಾಜೆಎನ್ನುತ್ತಾರೆ.ಅಂದುಗದ್ದೆಗೆಬೀಜಬಿತ್ತುವುದು,ಶು ಕಾರ್ಯಗಳಿಗೆ ನಾಂದಿ ಹಾಡಲಾಗುತ್ತದೆ. ಅಂದು ಮಳೆ ಸುರಿಯುವ ನಂಬಿಕೆ ತುಳುವರಿಗಿದ್ದು, ಅದು ಶುಸಂಕೇತವೆಂದುಾವಿಸಲಾಗುತ್ತದೆ.

ಪತ್ತನಾಜೆಯಂದು ಹುಟ್ಟುವ ನಾಯಕಿಯ ಸುತ್ತ ಈ ಚಿತ್ರ ನಡೆಯುತ್ತದೆ ಎಂದರು. ಚಿತ್ರದ ಚಿತ್ರೀಕರಣವನ್ನು ಮಂಗಳೂರು ಮತ್ತು ಉಡುಪಿ ಸುತ್ತಮುತ್ತ ನಡೆಸಲಾಗಿದೆ. ಮಂಗಳೂರಿನ ಪದವು ಮೇಗಿನ ಮನೆಯಲ್ಲಿ ಪ್ರಧಾನ ಚಿತ್ರೀಕರಣ ನಡೆದಿದೆ.ಮುಂಬಯಿ ಮತ್ತು ಕರ್ನಾಟಕದ ಚಿತ್ರರಂಗ ಮತ್ತು ದೂರದರ್ಶನದ ಸಿದ್ಧ-ಪ್ರಸಿದ್ಧ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ವಿಜಯಕುಮಾರ್ ಶೆಟ್ಟಿ ವಿವರಿಸಿದರು

ಖ್ಯಾತನಟ ಶಿವಧ್ವಜ್ ಚಿತ್ರದ ನಾಯಕರಾಗಿದ್ದು, ನಟ ಸೂರ್ಯರಾವ್, ಮುಂಬಯಿ ಬೆಡಗಿ ರೇಷ್ಮಾ ಶೆಟ್ಟಿ, ಮುಂಬಯಿಯ ಪ್ರತೀಕ್ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದಾರೆ. ಇವರೊಂದಿಗೆ ಚೇತನ್ ರೈ ಮಾಣಿ, ಸುಂದರ್ ರೈ ಮಂದಾರ, ಪ್ರವೀಣ್ ಮರ್ಕಮೆ, ಸೀತಾ ಕೋಟೆ, ರವಿ ಸುರತ್ಕಲ್, ಮುಂಬಯಿಯ ನಟರಾದ ಸುರೇಂದ್ರ ಕುಮಾರ್ ಹೆಗ್ಡೆ, ಕಾಜಲ್ ಕುಂದರ್, ಯಕ್ಷಗಾನ ಸ್ತ್ರೀ ಪಾತ್ರಧಾರಿ ಪ್ರಶಾಂತ್ ಶೆಟ್ಟಿ, ಪಲ್ಲವಿ ಶೆಟ್ಟಿ ಮುಂತಾದವರು ಚಿತ್ರದಲ್ಲಿದ್ದಾರೆ.
ಯಕ್ಷಗಾನದ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ನಟಿಸಿ, ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದ್ದಾರೆ. ವಿ.ಮನೋಹರ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕನ್ನಡದ ಪ್ರಸಿದ್ಧ ಛಾಯಾಗ್ರಾಹಗ ಸುರೇಶ್ ಬಾಬು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ವಿಜಯಕುಮಾರ್ ಕೊಡಿಯಾಲುಬೈಲು ಅವರ ಸಂಭಾಷಣೆ, ಚಂಚಲಾಕ್ಷಿ ಭಟ್‌ರ ಕಲಾನಿರ್ದೇಶನ, ತೋನ್ಸೆ ಪುಷ್ಕಳ ಕುಮಾರ್ ಅವರ ಭಾಗವತಿಕೆ ಇದೆ ಎಂದರು.

ಒಟ್ಟು 2ಗಂಟೆ 20 ನಿಮಿಷಗಳ ಈ ಚಿತ್ರವನ್ನು ಸೆ.1ರ ಶುಕ್ರವಾರ ಬೆಳಗ್ಗೆ 9:30ಕ್ಕೆ ಉಡುಪಿ ಕಲ್ಯಾಣಪುರದ ಆರ್ಶೀವಾದ ಟಾಕೀಸಿನಲ್ಲಿ ಬಿಡುಗಡೆ ಗೊಳಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಜಿ.ಶಂಕರ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಣಿಪಾಲದ ಟಿ.ಗೌತಮ್ ಪೈ, ಮಾಜಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಮನೋಹರ ಶೆಟ್ಟಿ, ಕೊಡವೂರು ದಿವಾಕರ ಶೆಟ್ಟಿ, ಎರ್ಮಾಳು ಶಶಿಧರ ಶೆಟ್ಟಿ ಭಾಗವಹಿಸುವರು.
ಮಂಗಳೂರಿನ ಜ್ಯೋತಿ, ಪಿವಿಆರ್ ಮಲ್ಟಿಫ್ಲೆಕ್ಸ್, ಉಡುಪಿಯ ಆರ್ಶೀವಾದ, ಮಣಿಪಾಲದ ಅಯೋನೆಕ್ಸ್ ಚಿತ್ರಮಂದಿಗಳಲ್ಲಿ ಚಿತ್ರ ಬಿಡುಗಡೆ ಕಾಣಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಟ ಪ್ರತೀಕ್ ಶೆಟ್ಟಿ, ಎನ್.ಪೃಥ್ವಿರಾಜ್, ಶಮೀನಾ ಆಳ್ವ, ಇಂದ್ರಾಳಿ ಜಯಕರ ಶೆಟ್ಟಿ, ಕೊಡವೂರು ದಿವಾಕರ ಶೆಟ್ಟಿ, ಎರ್ಮಾಳ್ ಶಶಿಧರ ಶೆಟ್ಟಿ, ಸುಧಾಕರ ಆಚಾರ್ಯ, ಪ್ರಕಾಶ್ ಸುವರ್ಣ ಕಟಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News