ನೀಟ್: ಅಂತಿಮ ಸುತ್ತಿನ ಕೌನ್ಸೆಲಿಂಗ್‌ಗೆ ಸೆ.7ರವರೆಗೆ ಗಡುವು ವಿಸ್ತರಿಸಿದ ಸುಪ್ರೀಂ

Update: 2017-08-29 16:52 GMT

ಹೊಸದಿಲ್ಲಿ,ಆ.29: ಸರ್ವೋಚ್ಚ ನ್ಯಾಯಾಲಯವು ದೇಶಾದ್ಯಂತ ಡೀಮ್ಡ್ ವಿವಿಗಳಲ್ಲಿ 2017-18ನೇ ಸಾಲಿಗೆ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅಂತಿಮ ಸುತ್ತಿನ ಕೌನ್ಸೆಲಿಂಗ್‌ಗೆ ಗಡುವನ್ನು ಆ.31ರಿಂದ ಸೆ.7ರವರೆಗೆ ವಿಸ್ತರಿಸಿದ್ದು, ಇದು ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ನೆಮ್ಮದಿಯನ್ನು ನೀಡಿದೆ.

ಆದರೆ, ಡೀಮ್ಡ್ ವಿವಿಗಳಿಗೆ ಮಾತ್ರ ಗಡುವನ್ನು ವಿಸ್ತರಿಸಲಾಗಿದ್ದು, ಇದನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಈ ಹಿಂದಿನ ಎರಡು ಸುತ್ತುಗಳಲ್ಲಿ ಯಾವದೇ ಕಾಲೇಜು ಲಭ್ಯವಾಗಿರದ ವಿದ್ಯಾರ್ಥಿಗಳಿಗಾಗಿ ಈ ಅಂತಿಮ ಸುತ್ತಿನ ಕೌನ್ಸೆಲಿಂಗ್‌ನ್ನು ನಡೆಸಲಾಗುತ್ತದೆ. ಕೌನ್ಸೆಲಿಂಗ್ ನಡೆಸುವ ಜವಾಬ್ದಾರಿಯನ್ನು ಹೊಂದಿರುವ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ(ಡಿಜಿಎಚ್‌ಎಸ್)ವು ಡೀಮ್ಡ್ ವಿವಿಗಳಲ್ಲಿ ಇನ್ನೂ 5,500 ಸೀಟ್‌ಗಳು ಉಳಿದುಕೊಂಡಿವೆ ಎಂದು ತಿಳಿಸಿದಾಗ, 1:10 ಅನುಪಾತವನ್ನು ಕಾಯ್ದುಕೊಳ್ಳಲು 55,000 ಅರ್ಹ ವಿದ್ಯಾರ್ಥಿಗಳ ಪೈಕಿ ಈ 5,500 ಸೀಟ್‌ಗಳನ್ನು ಭರ್ತಿ ಮಾಡಬೇಕು ಎಂದು ನ್ಯಾಯಾಲಯವು ನಿರ್ದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News